ರಾಷ್ಟ್ರೀಯ

ನೀಫಿಯು ರಿಯೊ ನಾಗಾಲ್ಯಾಂಡ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

Pinterest LinkedIn Tumblr

ಕೊಹಿಮಾ: ನಾಗ್ಯಾಲ್ಯಾಂಡ್ ನ ನೂತನ ಸಿಎಂ ಆಗಿ ನೀಫಿಯು ರಿಯೊ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನೀಫಿಯು ರಿಯೊ ಅವರೊಂದಿಗೆ 11 ಶಾಸಕರೂ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ನಾಗಾಲ್ಯಾಂಡ್ ರಾಜ್ಯಪಾಲರಾದ ಪದ್ಮನಾಭ ಆಚಾರ್ಯ ಅವರು ಶಾಸಕರು ಮತ್ತು ನೀಫಿಯು ರಿಯೋ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇತ್ತೀಚೆಗೆ ನಡೆದ ನಾಗ್ಯಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್ ಡಿಪಿಪಿ ಮೈತ್ರಿಕೂಟ 32 ಸ್ಥಾನಗಳಲ್ಲಿ ಜಯಗಳಿಸಿತ್ತು, ಎನ್ ಪಿಎಫ್ 23 ಸ್ಥಾನಗಳಲ್ಲಿ ಜಯಗಳಿಸಿತ್ತು.

Comments are closed.