
ನವದೆಹಲಿ: ಮೆಸ್ ಶುಲ್ಕವನ್ನು ಏಕಕಾಲಕ್ಕೆ ಶೇ.100ರಷ್ಟು ಹೆಚ್ಚಿಸುವ ಮೂಲಕ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು) ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮೆಸ್ ಪ್ರವೇಶ ಶುಲ್ಕ ವಿಭಾಗದ ಅಡಿಯಲ್ಲಿ, ಒಂದು ಸೆಮಿಸ್ಟರ್ನ ಸ್ಥಾಪನಾ ಶುಲ್ಕವನ್ನು 550 ರೂ.ಯಿಂದ 1,100 ರೂ.ಗೆ, ಮೆಸ್ ಭದ್ರತಾ ಠೇವಣಿಯನ್ನು 2,700 ರೂ.ಯಿಂದ 4,500 ರೂ.ಗೆ ಹೆಚ್ಚಿಸಲಾಗಿದೆ. ವಾರ್ಷಿಕ ಪಾತ್ರೆ ಸಾಮಾನುಗಳ ಶುಲ್ಕವನ್ನು 50 ರೂ.ಯಿಂದ 200 ರೂ. ಮತ್ತು ವಾರ್ಷಿಕ ದಿನಪತ್ರಿಕಾ ಶುಲ್ಕವು 15ರೂ.ಯಿಂದ 50 ರೂ.ಯಷ್ಟು ಪರಿಷ್ಕರಣೆಗೊಂಡಿದೆ.
ಫೆ.27ರಂದು ಜೆಎನ್ಯುವಿನ ವಿದ್ಯಾರ್ಥಿ ಡೀನ್ ಕಚೇರಿ ಈ ಅಧಿಸೂಚನೆ ಹೊರಡಿಸಿದ್ದು, ಮೆಸ್ ಶುಲ್ಕ, ಅತಿಥಿ ಊಟದ ದರ, ತಡ ಪಾವತಿಗೆ ದಂಡ ಹಾಗೂ ಹೆಚ್ಚುವರಿ ಆಹಾರ ಪದಾರ್ಥಗಳ ಶುಲ್ಕ ಪರಿಷ್ಕರಣಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ನೂತನ ನಿಯಮ ಜನವರಿ 1ರಿಂದ ಪೂರ್ವಾನ್ವಯಿಸಲ್ಪಡುತ್ತದೆ.
Comments are closed.