ರಾಷ್ಟ್ರೀಯ

‘ಆಲ್‌ ವಿಮೆನ್‌’ ವಿಮಾನ ಹಾರಿಸಿದ ಏರಿಂಡಿಯಾ

Pinterest LinkedIn Tumblr


ಕೋಲ್ಕತ: ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ಏರ್‌ ಇಂಡಿಯಾ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾಗವಾಗಿ ಕೋಲ್ಕತ-ದಿಮಾಪುರ-ಕೋಲ್ಕತ ಮಾರ್ಗದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗಳೇ ಇದ್ದ ವಿಮಾನದ ಹಾರಾಟ ನಡೆಸಿದೆ.

ಏರ್‌ಬಸ್‌ 319ರ ಎಐ709 ಹಾರಾಟವನ್ನು ಕ್ಯಾಪ್ಟನ್‌ ಆಕಾಂಕ್ಷಾ ವರ್ಮಾ ಮತ್ತು ಕ್ಯಾಪ್ಟನ್‌ ಸತೋವಿಸಾ ಬ್ಯಾನರ್ಜಿ ಕಾಕ್‌ಪಿಟ್‌ನಲ್ಲಿ ನಿರ್ವಹಿಸಿದರು. ಡಿ. ಭುಟಿಯಾ, ಎಂಜಿ ಮೋಹನ್‌ರಾಜ್, ಟಿ. ಘೋಷ್‌ ಮತ್ತು ಯಾತಿಲ್‌ ಕಾಥ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು ಎಂದು ಏರಿಂಡಿಯಾ ಪ್ರಕಟಣೆ ತಿಳಿಸಿದೆ.

ಏರಿಂಡಿಯಾ ಸಿಬ್ಬಂದಿ ವಿಭಾಗದ ಜನರಲ್ ಮ್ಯಾನೇಜರ್‌ ನವನೀತ್ ಸಿಧು ಮತ್ತು ವಿಮಾನ ನಿಲ್ದಾಣದ ಇತರ ಹಿರಿಯ ಅಧಿಕಾರಿಗಳು ವಿಮಾನದ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು. ಫೆಬ್ರವರಿ 8ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಪ್ರಕಟಣೆ ಹೇಳಿದೆ.

1985ರಲ್ಲೇ ಏರಿಂಡಿಯಾ ಕೋಲ್ಕತದಿಂದ ಸಿಲ್ಚಾರ್‌ ಮಾರ್ಗದಲ್ಲಿ ಜಗತ್ತಿನ ಮೊದಲ ‘ಸರ್ವ ಮಹಿಳಾ’ ವಿಮಾನದ ಹಾರಾಟ ನಡೆಸಿತ್ತು.

ದಿಲ್ಲಿ-ಸ್ಯಾನ್‌ಫ್ರಾನ್ಸಿಸ್ಕೋ-ದಿಲ್ಲಿ ಮಾರ್ಗದಲ್ಲಿ ಕಳೆದ ವರ್ಷ ಜಗತ್ತಿನ ಅತಿ ದೀರ್ಘ ವಿಮಾನ ಹಾರಾಟವನ್ನು ಮಹಿಳಾ ಸಿಬ್ಬಂದಿಗಳಿಂದಲೇ ನಡೆಸಿ ದಾಖಲೆ ನಿರ್ಮಿಸಿದ್ದಾಗಿ ಏರಿಂಡಿಯಾ ತಿಳಿಸಿದೆ.

Comments are closed.