ರಾಷ್ಟ್ರೀಯ

ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆ ಭೂಮಿ ನೀಡಿ ಸೌಹಾರ್ದತೆಗೆ ಮಾದರಿಯಾದ ಹಿಂದೂಗಳು

Pinterest LinkedIn Tumblr

ಫೈಜಾಬಾದ್‌: ಉತ್ತರಪ್ರದೇಶದ ಸಂತ ಕಬೀರ್‌ ನಗರ ಜಿಲ್ಲೆಯಲ್ಲಿ ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆಂದು ಹಿಂದೂಗಳು ಭೂಮಿ ಬಿಟ್ಟು ಕೊಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

ಹಿಂದೂಗಳ ಈ ಕಾರ್ಯದಿಂದಾಗಿ ಮುಸ್ಲಿಮರು ನಮಾಜ್‌ಗೆಂದು ಮಸೀದಿಗೆ ಹೋಗುವುದು ಸುಲಭವಾಗಲಿದೆ. ತವೈಪರ್‌ನಲ್ಲಿ ಮುಸ್ಲಿಮರು ನಮಾಜ್‌ಗೆ ಹೋಗುತ್ತಿದ್ದ ಮಸೀದಿಯ ಪಕ್ಕ ಯಾವಾಗಲೂ ಕೊಳಚೆ ನೀರು ತುಂಬಿಕೊಂಡಿರುತ್ತದೆ. 1963 ರಲ್ಲಿ ನಿರ್ಮಾಣಗೊಂಡ ಮಸೀದಿ ಸುತ್ತ ಪ್ರದೇಶದಲ್ಲಿ ಜನ ಸಂಖ್ಯೆ ಹೆಚ್ಚಿದ್ದು ಮಸೀದಿಗೆ ಹೋಗುವ ಸಮೀಪದ ದಾರಿ ಬಂದ್‌ ಆಗಿ ಸಮಸ್ಯೆಯಾಗಿತ್ತು ಎಂದು ಸ್ಥಳೀಯ ಶಿಕ್ಷಕರೊಬ್ಬರು ಹೇಳಿದ್ದಾರೆ.

ಮುಸ್ಲಿಮರು ಎದುರಿಸುತ್ತಿದ್ದ ಈ ಸಮಸ್ಯೆ ಪರಿಹರಿಸಲು ನಾಚು ಸೂಕ್ತ ಕ್ರಮ ಕೈಗೊಳ್ಳಲು ಮುಂದಾದೆವು. ಗ್ರಾಮದ ರಾಜೇಂದ್ರ ಸಿಂಗ್‌, ಕಪಿಲ್‌ ಸಿಂಗ್‌, ಮಹೇಂದ್ರ ಸಿಂಗ್‌ ಮತ್ತು ನಕ್ಚೆಂದ್‌ ಸಿಂಗ್‌ ಅವರು ಮಸೀದಿ ನಿರ್ಮಿಸುವ ಜಾಗಕ್ಕೆ ಹೋಗಲು ದಾರಿಗಾಗಿ ನೂರು ಮೀಟರ್‌ ಜಾಗ ದಾನ ಮಾಡಿದ್ದಾರೆ ಎಂದು ಗ್ರಾಮದ ಪ್ರಧಾನರಾಗಿರುವ ಊರ್ಮಿಳಾ ದೇವಿ ತಿಳಿಸಿದ್ದಾರೆ.

Comments are closed.