ರಾಷ್ಟ್ರೀಯ

ಮುಸ್ಲಿಂ ಬಡಗಿ ನೀಡಿದ ಕುರ್ಚಿ ಮೇಲೆ ಕಂಚಿ ಶ್ರೀಗಳ ಪಾರ್ಥಿವ ಶರೀರ!

Pinterest LinkedIn Tumblr


ಹೊಸದಿಲ್ಲಿ: ದೈವಾಧೀನರಾಗಿರುವ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶ್ರೀ (82) ಜಯೇಂದ್ರ ಸರಸ್ವತಿ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮುಸ್ಲಿಂ ಸಮುದಾಯದ ಬಡಗಿಯೊಬ್ಬರು ನೀಡಿದ ಕುರ್ಚಿಯ ಮೇಲೆ ಕೂರಿಸಿರುವುದು ವಿಶೇಷ.

ಕಳೆದ ಸೋಮವಾರವಷ್ಟೇ ನಾಸೀರ್ ಎಂಬವರು ಮಠಕ್ಕೆ ಕುರ್ಚಿಯನ್ನು ನೀಡಿದ್ದರು. ‘ಮಠಕ್ಕೆ ನೀಡಿದ್ದ ಕುರ್ಚಿಯನ್ನು ಇಷ್ಟಪಟ್ಟ ಶ್ರೀಗಳು ನನಗೆ ಸೇಬು ಹಣ್ಣು ನೀಡಿ ಸತ್ಕರಿಸಿದ್ದರು’ ಎಂದು ನಾಶೀರ್ ಹೇಳಿಕೊಂಡಿದ್ದಾರೆ. ಸ್ವಾಮೀಜಿಯವರ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿದ್ದ ನಾಸೀರ್ ಅವರನ್ನು ಕಿರಿಯ ಸ್ವಾಮೀಜಿ ಗುರುತಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಿದರು.

ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು 69ನೇ ಶಂಕರಾಚಾರ್ಯರಾಗಿದ್ದರು. ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಮಠಮಾನ್ಯಗಳ ಮುಖ್ಯಸ್ಥರನ್ನು ‘ಶಂಕರಾಚಾರ್ಯರು’ ಎಂದು ಕರೆಯುತ್ತಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ವಾಮೀಜಿಯವರನ್ನು ಜನವರಿ ಚೆನ್ನೈನ ಶಂಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Comments are closed.