ರಾಷ್ಟ್ರೀಯ

ನ್ಯೂಟನ್‌ಗೂ ಮುನ್ನವೇ ಚಲನೆಯ ಸಿದ್ಧಾಂತಗಳನ್ನು ಭಾರತೀಯರು ಅನ್ವೇಷಿಸಿದ್ದರು: ಕೇಂದ್ರ ಸಚಿವ

Pinterest LinkedIn Tumblr

ದೆಹಲಿ: ಚಾರ್ಲ್ಸ್ ಡಾರ್ವಿನ್ ನ ವಿಕಸನ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು ಎಂದು ಹೇಳಿ ಸುದ್ದಿಯಾಗಿದ್ದ ಕೇಂದ್ರ ಶಿಕ್ಷಣ ಖಾತೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಇದೀಗ ಮತ್ತೊಂದು ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

ಐಸಾಕ್ ನ್ಯೂಟನ್ ಚಲನೆಯ ನಿಯಮಗಳನ್ನು ರಚಿಸುವುದಕ್ಕಿಂತ ಬಹಳಷ್ಟು ಮೊದಲೇ ಭಾರತೀಯ ಮಂತ್ರಗಳು ಚಲನೆಯ ಸಿದ್ಧಾಂತಗಳ ಕುರಿತಂತೆ ನಿಯಮಗಳನ್ನು ಕ್ರೋಢೀಕರಿಸಿದ್ದವು ಎಂದು ಸತ್ಯಪಾಲ್‌ ಸಿಂಗ್‌ ಹೇಳಿದ್ದಾರೆ.

“ಉತ್ತಮ ಶಿಕ್ಷಣ ಪಡೆಯಲು ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ವಾಸ್ತುವಿಗನುಗುಣವಾಗಿ ಇರಬೇಕಾಗಿರುವುದು ಅಗತ್ಯವಾಗಿದೆ” ಎಂದು ಶಿಕ್ಷಣ ನೀತಿಯ ಸಲಹಾ ಮಂಡಳಿಯ ಸಭೆಯಲ್ಲಿ ಸಚಿವರು ಹೇಳಿದ್ದರೆಂದು ವರದಿಯಾಗಿದೆ.

ಐಸಾಕ್ ನ್ಯೂಟನ್ ಗಿಂತ ಬಹಳಷ್ಟು ಮುಂಚೆಯೇ ಮಂತ್ರಗಳು ಚಲನೆಯ ನಿಯಮಗಳನ್ನು ಅನ್ವೇಷಣೆ ಮಾಡಲಾಗಿತ್ತು. ಇಂಥ ವಿಚಾರಗಳ ಜತೆಗೆ ನಮ್ಮ ಶಾಲಾ ಪಠ್ಯಗಳಲ್ಲಿ ಸಾಂಪ್ರದಾಯಿಕ ಜ್ಞಾನವನ್ನೂ ಸೇರಿಸುವುದು ಅಗತ್ಯವಾಗಿದೆ ಎಂದು ಸಿಂಗ್ ಸಭೆಯಲ್ಲಿ ಹೇಳಿದ್ದಾಗಿ ಮುಂಬಯಿಯ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ರಾಜಸ್ಥಾನದ ಶಿಕ್ಷಣ ಸಚಿವ ಕುನ್ವರ್ ವಿಜಯ್ ಶಾ ಮಾತನಾಡಿ “ತರಗತಿಗಳಲ್ಲಿ ವಿದ್ಯಾರ್ಥಿಗಳು `ಯೆಸ್ ಸರ್’ ಹೇಳುವ ಬದಲು `ಜೈ ಹಿಂದ್’ ಹೇಳಬೇಕೆಂದು ಸಲಹೆ ನೀಡಿದರಲ್ಲದೆ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದು ಹಾಗೂ ರಾಷ್ಟ್ರಧ್ವಜ ಹಾರಿಸಬೇಕು” ಎಂದು ಹೇಳಿದ್ದಾಗಿ ತಿಳಿದುಬಂದಿದೆ.

ಸಂಸ್ಕೃತಿ ಆಧರಿತ ಶಿಕ್ಷಣ ನೀಡಬೇಕೆಂದು ಪರಿಸರ, ಅರಣ್ಯ ಖಾತೆಯ ಸಹಾಯಕ ಸಚಿವ ಮಹೇಶ್ ಶರ್ಮ ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಎನ್‍ಸಿಇಆರ್‍ಟಿ ಪಠ್ಯವನ್ನು ಮಾರ್ಪಾಡುಗೊಳಿಸಬೇಕೆಂದೂ ಅವರು ತಿಳಿಸಿದರು ಎನ್ನಲಾಗಿದೆ.

Comments are closed.