ಲಕ್ನೋ : 2011ರಲ್ಲಿ ಅಭೂತಪೂರ್ವ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ನಡೆಸಿ ದೇಶಾದ್ಯಂತ ಮಿಂಚಿನ ಸಂಚಲನಕ್ಕೆ ಕಾರಣರಾಗಿದ್ದ ಸಮಾಜ ಸೇವಾ ಕಾಯರಕರ್ತ ಅಣ್ಣಾ ಹಜಾರೆ ಅವರು ದಿಲ್ಲಿಯಲ್ಲಿ ಮುಂದಿನ ತಿಂಗಳು ಇನ್ನೊಂದು ಬೃಹತ್ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ.
ತಮ್ಮ ಈ ಸತ್ಯಾಗ್ರಹ ಆಂದೋಲನ ಸೇರಬಯಸುವವರು “ಚುನಾವಣಾ ರಾಜಕಾರಣವನ್ನು ಪ್ರವೇಶಿಸುವುದಿಲ್ಲ” ಎಂಬ ಪ್ರತಿಜ್ಞೆ ಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಅಣ್ಣಾ ಹೇಳಿದ್ದಾರೆ.
80ರ ಹರೆಯ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು 2011ರ ಬೃಹತ್ ಆಂದೋಲದಲ್ಲಿ ಪಾಲ್ಗೊಂಡಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹಿತ ಹಲವು ನಾಯಕರು ರಾಷ್ಟ್ರ ರಾಜಕಾರಣಕ್ಕೆ ಜಿಗಿದಿದ್ದರು.
ಈ ಬಾರಿಯ ತಮ್ಮ ಆಂದೋಲನದಲ್ಲಿ ಪಾಲ್ಗೊಳ್ಳುವವರು ತಾವು ಭವಿಷ್ಯದಲ್ಲಿ ರಾಜಕೀಯ ರಂಗವನ್ನು ಸೇರುವುದಿಲ್ಲ ಎಂದು ಕಡ್ಡಾಯವಾಗಿ ಅಫಿದಾವಿತ್ ಬರೆದುಕೊಡಬೇಕು ಎಂದು ಅಣ್ಣಾ ಹೇಳಿದ್ದಾರೆ.
-ಉದಯವಾಣಿ