ರಾಷ್ಟ್ರೀಯ

ಚಿರನಿದ್ರೆಗೆ ಜಾರಿದ ನಟಿ ಶ್ರೀದೇವಿಯ ಮಾನವೀಯ ಬಹಿರಂಗ !

Pinterest LinkedIn Tumblr

ಮುಂಬೈ: ಇನ್ನು ಕೆಲವೇ ಗಂಟೆಗಳಲ್ಲಿ ದಿವಂಗತ ನಟಿ ಶ್ರೀದೇವಿ ಅವರ ಅಂತಿಮ ಯಾತ್ರೆ ಆರಂಭವಾಗಲಿದ್ದು, ಸೂಪರ್ ಸ್ಚಾರ್ ಶ್ರೀದೇವಿ ಅವರನ್ನು ನೋಡಿದ್ದ ಅಭಿಮಾನಿಗಳಿಗೆ ಅವರ ಮತ್ತೊಂದು ಸಂಸ್ಕಾರ, ಮಾನವೀಯತೆಯ ಮುಖ ಪರಿಚಯವಾಗುತ್ತಿದೆ.

ಶ್ರೀದೇವಿ ಅವರ ಸಾವಿನ ವಿಚಾರ ತಿಳಿದೊಡನೆಯೇ ಉತ್ತರ ಪ್ರದೇಶದ ಅಂಧ ವ್ಯಕ್ತಿಯೋರ್ವ ಮುಂಬೈನಲ್ಲಿರುವ ಅವರ ನಿವಾಸಕ್ಕೆ ದೌಡಾಯಿಸಿದ್ದು, ಗೇಟ್ ಬಳಿ ನಿಂತು ನಿರಂತರವಾಗಿ ಅಳುತ್ತಿದ್ದ. ಈ ವಿಚಾರವನ್ನು ತಿಳಿದ ಸುದ್ದಿ ಸಂಸ್ಥೆ ಆತನ ಬಳಿ ವಿಚಾರಿಸಿದಾಗ ಹಿಂದೆ ನಟಿ ಶ್ರೀದೇನಿ ಆತನ ಕುಟುಂಬಕ್ಕೆ ಮಾಡಿದ್ದ ನೆರವನ್ನು ನೆನೆದು ಕಣ್ಣೀರು ಹಾಕಿದ.

ಜತಿನ್ ವಾಲ್ಮೀಕಿ ಎಂಬ ಅಂಧ ವ್ಯಕ್ತಿ ಶ್ರೀದೇವಿ ಸಿನಿಮಾಗಳಿಗೆ ಅಭಿಮಾನಿಯಾಗದೇ ಇದ್ದರೂ, ಶ್ರೀದೇವಿ ಅವರ ಸಾಮಾಜಿಕ ಕಾರ್ಯಗಳಿಂದ ಅವರ ಅಭಿಮಾನಿಯಾಗಿದ್ದಾನಂತೆ. ಕೇವಲ ಅಷ್ಟು ಮಾತ್ರವಲ್ಲದೇ ಇಂದು ಆತನ ಕುಟುಂಬ ಬದುಕಿದೆ ಎಂದರೆ ಅದಕ್ಕೆ ನಟಿ ಶ್ರೀದೇವಿ ಅವರ ಕಾರಣ ಎಂದು ಜತಿನ್ ವಾಲ್ಮೀಕಿ ಹೇಳಿಕೊಂಡಿದ್ದಾನೆ.

ಕಾರ್ಯಕ್ರಮದಲ್ಲಿ ನಟಿ ಶ್ರೀದೇವಿ ಅವರನ್ನು ಭೇಟಿ ಮಾಡಿದ್ದ ಜತಿನ್ ವಾಲ್ಮೀಕಿ ಬ್ರೈನ್ ಟ್ಯೂಮರ್ ಆಗಿದ್ದ ತನ್ನ ಸಹೋದರ ಕುರಿತು ನೋವು ತೋಡಿಕೊಂಡಿದ್ದಾನೆ. ಈ ವಿಚಾರ ತಿಳಿದ ನಟಿ ಶ್ರೀದೇವಿ ತತ್ ಕ್ಷಣವೇ ಒಂದು ಲಕ್ಷ ರೂ ನೆರವು ನೀಡಿದ್ದರಂತೆ. ಈ ಹಣದಿಂದ ಜತಿನ್ ವಾಲ್ಮೀಕಿಗೆ ಖಾಸಗಿ ಆಸ್ಪತ್ರೆಗೆ ಶಸ್ಚ್ರಚಿಕಿತ್ಸೆ ನಡೆಸಿ ಆತನನ್ನು ಗುಣಪಡಿಸಲಾಗಿತ್ತು. ಅಲ್ಲದೆ ನಟಿ ಶ್ರೀದೇವಿ ಆಸ್ಪತ್ರೆ ಬಿಲ್ ನಿಂದಲೂ ಸುಮಾರು 1 ಲಕ್ಷ ರೂ. ವಿನಾಯಿತಿ ಕೊಡಿಸಿದ್ದರಂತೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಜತಿನ್ ವಾಲ್ಮೀಕಿ ಇಂದು ನಮ್ಮ ಕುಟುಂಬ ಜೀವಂತವಾಗಿದ್ದರೆ ಅದಕ್ಕೆ ಶ್ರೀದೇವಿ ಅವರೇ ಕಾರಣ. ನಾನು ಅವರ ಸಿನಿಮಾಗಳಿಂದ ಅವರ ಅಭಿಮಾನಿಯಾಗಿಲ್ಲ. ಬದಲಿಗೆ ಅವರ ಸಾಮಾಜಿಕ ಕಾರ್ಯಗಳಿಂದ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಇದೇ ಕಾರಣಕ್ಕೆ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದೇನೆ ಎಂದು ಜತಿನ್ ವಾಲ್ಮೀಕಿ ಹೇಳಿದ್ದಾನೆ.

ಅವರಿಗೆ ಅಂತಿಮ ನಮನ ಸಲ್ಲಿಸುವುದನ್ನು ಬಿಟ್ಟರೆ ನಾನು ಬೇರೇನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಹಳ ಕಷ್ಟಪಟ್ಟು ಉತ್ತರ ಪ್ರದೇಶದಿಂದ ಮುಂಬೈಗೆ ಬಂದಿದ್ದೇನೆ. ಕನಿಷ್ಟ ಪಕ್ಷ ಆಕೆಯ ಅಂತಿಮ ಮೆರವಣಿಗೆಯಲ್ಲಾದರೂ ನಾನು ಪಾಲ್ಗೊಂಡು ಅವರಿಗೆ ನನ್ನ ಅಂತಿಮ ನಮನ ಸಲ್ಲಿಸಬೇಕೆಂದು ಕೊಂಡಿದ್ದೇನೆ ಎಂದು ಹೇಳಿದ್ದಾರೆ.

Comments are closed.