
ಅಲ್ವಾರ್: ಬೆನ್ನಟ್ಟಿ ಬಂದ ಪೊಲೀಸರಿಂದ ಎಸ್ಕೇಪ್ ಆಗಲು ಯತ್ನಿಸಿದ ಶಂಕಿತ ಗೋ ಸಾಗಣೆದಾರನೊಬ್ಬ ಚಲಿಸುತ್ತಿದ್ದ ವಾಹನದಿಂದ ಹಾರಿ ಮೃತಪಟ್ಟ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಡೇರಾ ಗ್ರಾಮದಲ್ಲಿ ನಡೆದಿದೆ.
ಹರಿಯಾಣಾದ ನುಹ್ ಜಿಲ್ಲೆಯ ನಿವಾಸಿ ಆಷ್ ಮೊಹಮ್ಮದ್ ಎಂಬಾತನೇ ಮೃತ ವ್ಯಕ್ತಿ. ವಾಹನದಲ್ಲಿದ್ದ 23 ರಾಸುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈ ಪೈಕಿ 5 ಹಸುಗಳು ಮೃತಪಟ್ಟಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ದೌಸಾ ಮತ್ತಿ ಅಲ್ವಾರ್ ಪೊಲೀಸರು ವಾಹನವೊಂದನ್ನು ಬೆನ್ನಟ್ಟಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮೊಹಮ್ಮದ್ ಎಂಬಾತ ಚಲಿಸುತ್ತಿದ್ದ ವಾಹನದಿಂದ ಹಾರಿದ್ದು, ಆಯತಪ್ಪಿ ಅದೇ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
Comments are closed.