
ಲಖನೌ: ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಪ್ ಗ್ರೂಪ್ ಸೃಷ್ಟಿಸಿ, ಅದಕ್ಕೆ ಹಲವರನ್ನು ಆಮಂತ್ರಿಸಿದ ವಿದ್ಯಾರ್ಥಿ ವಿರುದ್ದ ಉತ್ತರ ಪ್ರದೇಶದ ಲಖನೌ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಗ್ರೂಪ್ ಅನ್ನು 9 ನೇ ತರಗತಿಯ ವಿದ್ಯಾರ್ಥಿ ರಚಿಸಿದ್ದು, ರಾಜಸ್ಥಾನದ ಭಿಲ್ವಾಡದವನು ಎಂದು ಪೊಲೀಸರು ಗುರುತಿಸಿದ್ದಾರೆ. ಲಷ್ಕರ್ ಇ ತೊಯ್ಬಾ ಎಂಬ ಗುಂಪಿಗೆ ಸೇರಲು ತನಗೆ ಆಮಂತ್ರಣ ಬಂದಾಗ, ವ್ಯಕ್ತಿಯೊಬ್ಬರು ಪೊಲೀ ಸರಿಗೆ ದೂರು ನೀಡಿದ್ದರು. ಈ ಮೆಸೇಜಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಈ ಹುಡುಗನೇ ಗ್ರೂಪ್ ಸೃಷ್ಟಿಸಿದ್ದು ತಿಳಿದಿದೆ.
Comments are closed.