ರಾಷ್ಟ್ರೀಯ

ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್‌ ನೀಡಿ: ರಾಹುಲ್‌

Pinterest LinkedIn Tumblr


ವಿಜಯಪುರ : ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರಾಜಕೀಯ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಹೇಳಿದರು.

ವಿಜಯಪುರ ಜಿಲ್ಲೆ ತಿಕೋಟಾದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿದರು ಅವರು ಮಾತನಾಡಿದರು.

ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸು ಮಾಡಿಸುವ ಮೂಲಕ ಮಹಿಳೆಯರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದರು.

ಮಹಿಳೆಯರ ಸುರಕ್ಷತೆಯಲ್ಲಿ ಕರ್ನಾಟ ರಾಜ್ಯ ನಂ. 1 ಸ್ಥಾನದಲ್ಲಿದೆ. ಈಗಾಗಲೇ ಶೇ. 50 ರಷ್ಟು ಮಹಿಳೆಯರಿಗೆ ಸ್ಥಾನ ಕಲ್ಪಿಸಿದರೆ ಎಂದು ರಾಜ್ಯ ಸರಕಾರದ ಕ್ರಮವನ್ನು ಪ್ರಶಂಸಿದರು.

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕೆಂದು ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದರು. ಅಲ್ಲದೇ ಸರಕಾರ ರಚನೆಯ ಬಳಿಕವೂ ಮಹಿಳೆಯರಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನವನ್ನು ಕಲ್ಪಿಸಬೇಕೆಂದೂ ಸಲಹೆ ಮಾಡಿದರು.

‘ಬಸವಣ್ಣನ ಕರ್ಮಭೂಮಿಗೆ ಬಂದ್ದಿದ್ದು ನನಗೆ ಸಂತಸವಾಗಿದೆ, ಈ ಕಾರ್ಯಕ್ರಮ ದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ನೋಡಿ ನನಗೆ ಬಸವಣ್ಣನವರ ನೆನಪಾಗುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.

ತಿಕೋಟಾದಲ್ಲು ಮಾತನಾಡಿ, ಅಕ್ಕಮಹಾದೇವಿ ಅವರು ಈ ನಾಡಿನ ಮಹಾನ ಮಹಿಳೆಯಾಗಿದ್ದಾರೆ, ರಾಣಿ ಚನ್ನಮ್ಮ ಅವರು ದೇಶಕ್ಕಾಗಿ ಹೋರಾಡಿದ ಮಹಿಳೆಯಾಗಿದ್ದು ಅವರು ನಮ್ಮ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದರು ಮತ್ತು ನಾವೆಲ್ಲರು ಒಂದೆ ಎಂದಿದ್ದರು ಅದು ನಮ್ಮ ಪಕ್ಷದ ಆದ್ಯತೆಯಾಗಿದೆ, ರಾಜ್ಯ ಸಭೆ, ವಿಧಾನ ಸಭೆ, ಲೋಕಸಭೆಗೆ ಹೆಚ್ಚಿನ ಮಹಿಳೆಯರು ಆಯ್ಕೆಯಾಗಬೇಕು. ಈ ನಿಟದಟಿನಲ್ಲಿ ಕರ್ನಾಟಕ ಸರಕಾರ ಕಳೆದ ಐದು ವರ್ಷಗಳಲ್ಲಿ ಮಹಿಳೆಯರಿಗಾಗಿ ಹತ್ತಾರು ಕೆಲಸಗಳನ್ನು ಮಾಡಿದೆ. ಮಹಿಳೆಯರ ರಕ್ಷಣೆಯಲ್ಲಿ ಕರ್ನಾಟಕ ಮುಂದಿದೆ ಎಂದರು.

ನೀರಾವರಿಯ ಈ ದೊಡ್ಡ ಕಾಮಗಾರಿ ಉದ್ಘಾಟನೆ ಸಂತಸತಂದಿದೆ, ನೀರಾವರಿ ಯಿಂದ ಬಹಳ ರೈತರಿಗೆ ಉಪಯೋಗವಾಗಲಿದೆ ಎಂದರು.

ಕರ್ನಾಟಕದ ಮೂಲೆ ಮೂಲೆಗಳಿಗೆ ನೀರು ತಲುಪಿಸಬೇಕಿದೆ, ಸಿವಿಲ್ ಸರ್ವಿಸನಲ್ಲಿ ಮೀಸಲಾತಿ ಹೆಚ್ಚಿಸಿದ್ದೆವೆ, ಬಿಜೆಪಿ ಸರಕಾರಿ ರಾಜ್ಯಗಳಲ್ಲಿ ಮಹಿಳೆಯರು ಆ ಸರಕಾರದ ವಿರುದ್ದ ಆಂದೊಲನ ಮಾಡಿದ್ದಾರೆ, ಮೋದಿ ಗುಜರಾತ, ಉತ್ತರ ಪ್ರದೇಶದಲ್ಲಿ ಎಲ್ಲಿಯೂ ಮಹಿಳೆಯರ ಸಲುವಾಗಿ ಒಂದು ಕಾರ್ಯಕ್ರಮ ಮಾಡಿಲ್ಲ, ಪ್ರತಿವರ್ಷ ಕರ್ನಾಟಕ ಸರಕಾರ ಮಹಿಳೆಯರ ಸಲುವಾಗಿ ಅವರಿಗೆ ಸಹಾಯ ಮಾಡಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಎಂಟು ಸಾವಿರ ರೂಪಾಯಿ ನೀಡುತ್ತಿದ್ದೆವೆ, ಸಾಲ ತೆಗೆದುಕೊಂಡು ಮಹಿಳೆಯರು ಉದ್ಯೋಗ ಮಾಡಬಹುದಾಗಿದೆ, 25 ಸಾವಿರ ರೂಪಾಯಿಯನ್ನು ಸ್ವಸಹಾಯ ಸಂಘಗಳಿಗೆ ನೀಡಿದೆ, ದೇಶದ ಮಹಿಳೆಯರಿಗೆ ಯು.ಪಿ.ಎ ಸರಕಾರದ ಅವಧಿಯಲ್ಲಿ ಸಹಾಯ ಮಾಡಿದ್ದೆವು, ಆದ್ರೆ ಬಿಜೆಪಿ ಅದನ್ನು ರದ್ದು ಪಡಿಸಲು ಹೊಂಚು ಹಾಕುತ್ತಿದೆ, ಆದರೆ ಕರ್ನಾಟಕದಲ್ಲಿ ಮಹಿಳೆಯರಿಗೆ ಸಹಾಯ ಮಾಡಿದ್ದೆವೆ, ಬಿಜೆಪಿ ರಾಜ್ಯದಲ್ಲಿದ್ದಾಗ 1030 ಅತ್ಯಾಚಾರಗಳಾಗಿದ್ದವು, ನಮ್ಮ ಸರಕಾರದಲ್ಲಿ 500 ಅತ್ಯಾಚಾರ ಪ್ರಕರಣಗಳಾಗಿದ್ದು ನಾವು ಮಹಿಳೆಯರ ಸುರಕ್ಷತೆ ಮಾಡಿದ್ದೆವೆ ಎಂದರು..

ಪಂಚಾಯತಿ ರಾಜ್ಯದಲ್ಲಿ ನಾವು ಮಹಿಳೆಯರಿಗೆ ಮೀಸಲಾತಿ ಮಾಡಿದ್ದೆವೆ, ಪಾರ್ಲಿಮೆಂಟ್ ನಲ್ಲಿ ನಾವು ಮಹಿಳೆಯರಿಗಾಗಿ ತಂದಿದ್ದೆವು ಆದ್ರೆ ಬಿಜೆಪಿ ಅದನ್ನು ತಡೆ ಹಿಡಿದಿದೆ, ಆದ್ರೆ ನಾವು ಮುಂದೆ ಅಧಿಕಾರಕ್ಕೆ ಬಂದು ಅದನ್ನು ಜಾರಿಗೆ ತರುತ್ತೆವೆ, ಬಸವಣ್ಣನವರು ಹೇಳಿದಂತೆ ನುಡಿದಂತೆ ರಾಜ್ಯದಲ್ಲಿ ನಡೆದಿದ್ದೆವೆ, ಮೋದಿ ಹೇಳಿದ ಮಾತೀನಂತೆ ನಡೆದಿಲ್ಲ, ಅವರು ಹೇಳಿದ್ದು ಒಂದು ಆಗಿಲ್ಲ, ನಾನು ಅವರ ಆಫೀಸಗೆ ಹೋಗಿ ವಿನಂತಿ ಮಾಡಿದ್ದೆನೆ ಉದ್ಯೋಗ ಮಾಡುವವರ ಸಾಲ ಮನ್ನಾ ಮಾಡುತ್ತಿರಿ, ನಮ್ಮ ರೈತರ ಸಾಲಮನ್ನಾ ಮಾಡಿ ಎಂದು, ಆದ್ರೆ ಅವರು ಅಂದಿನಿಂದ ಇಂದಿನವರೆಗೂ ನನಗೆ ಉತ್ತರ ಕೊಟ್ಟಿಲ್ಲ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಆದ್ರೆ ನಾನು ಸಿದ್ದರಾಮಯ್ಯ ಅವರಿಗೆ ನಾನು ಕೇಳಿದ ಕೆಲವು ದಿನಗಳಲ್ಲಿ ಕರ್ನಾಟಕ ಸರಕಾರ 8,600 ಕೋಟಿ ಸಾಲಮನ್ನಾ ಮಾಡಿದ್ದಾರೆ, ಮೋದಿ ಅವರು ಬಸವಣ್ಣನವರ ಬಗ್ಗೆ ಮಾತಾಡತಾರೆ ಆದ್ರೆ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ, ಪ್ರತಿವರ್ಷ ಉದ್ಯೋಗ ಸೃಷ್ಟಿ ಮಾಡುತ್ತೆನೆ ಅಂದವರು ಏನು ಮಾಡಿಲ್ಲ, ಕೋಟಿ ಕೋಟಿ ಯುವ ಜನತೆ ಉದ್ಯೋಗ ದ ಕನಸು ಕಂಡಿದ್ದರು, ಆದ್ರೆ ಮೋದಿ ಅದನ್ನು ನನಸು ಮಾಡಲಿಲ್ಲ, ಮೋದಿ ಅವರ ಮಂತ್ರಿ ಹೇಳಿದ ಹಾಗಿ ಒಂದು ದಿನದಲ್ಲಿ 400 ಜನರಿಗೆ ಮಾತ್ರ ಉದ್ಯೋಗ ನೀಡಿದ್ದಾರೆ, ಮೋದಿ ಹೋದಲ್ಲೆಲ್ಲ ಭ್ರಷ್ಟಾಚಾರದ ಭಾಷಣ ಮಾಡುತ್ತಾರೆ ಆದ್ರೆ ಅವರ ಪಕ್ಕದಲ್ಲೆ ಮಾಜಿ ಮುಖ್ಯಮಂತ್ರಿ ಸೇರಿದಂತೆ 4 ಜನ ಮಾಜಿ ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ, ಅಮಿತ್ ಶಾ ಪುತ್ರ ಕೋಟಿ ಕೋಟಿ ಮಾಡಿಕೊಂಡಿದ್ದಾರೆ ಎಂದರು

ಮೋದಿ ಸ್ವಯಂ ಹೋಗಿ ಪ್ಯಾರಿಸನಲ್ಲಿ ಹೋಗಿ ಕಾಂಕ್ಟ್ರೈಕ್ಟ್ ಬದಲಿಸಿದ್ದಾರೆ, ನಾವು ಕೇಳಿದ ಮೂರು ಪ್ರಶ್ನೆ ಗೆ ಒಂದಕ್ಕೂ ಮೋದಿ ಉತ್ತರ ಕೊಟ್ಟಿಲ್ಲ, ಸರಕಾರಿ ಸೌಮ್ಯದ ಕಂಪನಿ ನಿಮ್ಮ ಗೆಳೆಯರಿಗೆ ಯಾಕೆ ಕೊಟ್ಟಿದ್ದಿರಿ, ಒಂದಕ್ಕಾದರು ಉತ್ತರ ಕೊಡಿ, ನೀರವ ಮೋದಿ ಕೋಟಿ ಕೋಟಿ ಲೂಟಿ ಮಾಡಿ ದೇಶ ಬಿಟ್ಟು ಓಡಿಹೋದರು ಅವರು ಕೇಳಲ್ಲ, ಕರ್ನಾಟಕ ಸರ್ಕಾರದ ಪ್ರಾಮಾಣಿಕ ಸರಕಾರ, ಒಂದು ಕಪ್ಪು ಚುಕ್ಕೆ ಇಲ್ಲದ ಸರಕಾರ ಎಂದು ರಾಜ್ಯ ಕಾಂಗ್ರಸ್ ಸರಕಾರವನ್ನು ಪ್ರಶಂಸಿಸಿದರು.

ಹಿಂದುಸ್ತಾನದ ಜನರ 22 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದರು ನೀವು ಏನ ಮಾಡತಾ ಇದ್ದಿರಿ, ವಿಜಯ ಮಲ್ಯ ಸೇರಿದಂತೆ ಎಲ್ಲರು ದೇಶ ಲೂಟಿ ಮಾಡಿದರು ಸುಮ್ಮನೆ ಕೂಡುತ್ತಿರಿ, ದಲಿತದ ಬಗ್ಗೆ ಮಾತನಾಡುವರು ಅವರಿಗೆ ಬೇಕಾದಷ್ಟು ಹಣ ನೀಡಿಲ್ಲ, ಎಲ್ಲವನ್ನು ಖಾಸಗಿ ಮಾಡಿ ಮೋದಿ ಗುಜರಾತನ್ನು ಮಾರಿದ್ದಾರೆ, ಆದ್ರೆ ನಮ್ಮ ಕರ್ನಾಟಕ ಶಿಕ್ಷಣ, ಆರ್ಥಿಕ ಮತ್ತು ಆರೋಗ್ಯ ದಲ್ಲಿ ಹಲವಾರು ಅಭಿವೃದ್ಧಿ ಮಾಡಿದ್ದೆವೆ, ಎಲ್ಲಿ ಬಿಜೆಪಿ ಸರಕಾರ ಇದೆಯೋ ಅಲ್ಲೆಲ್ಲ ಹಿಂಸೆಗಳಾಗುತ್ತಿವೆ, ಗುಜರಾತಿನಲ್ಲಿ ದಲಿತರ ಮೇಲೆ ಹಲ್ಲೆಯಾಗುತ್ತೆ ಆದ್ರು ಅವರು ಮಾತನಾಡಲ್ಲ, ಬೇರೆ ಕಡೆಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಕೊಲೆ ಆದ್ರು ಅವರು ಮಾತನಾಡಲ್ಲ ಎಂದರು.

Comments are closed.