ರಾಷ್ಟ್ರೀಯ

ಪಂಜಾಬ್‌ ಬ್ಯಾಂಕ್‌ ಕಾಂಡದ ಬಳಿಕ ಕ್ರಮಕ್ಕೆ ಮುಂದಾದ ವಿತ್ತ ಸಚಿವಾಲಯ

Pinterest LinkedIn Tumblr


ದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬೃಹತ್‌ ಕಾಂಡದ ಹಿನ್ನೆಲೆಯಲ್ಲಿ ನೂತನ ನಿಯತ್ರಂಣ ಕ್ರಮಗಳನ್ನು ಜಾರಿ ಮಾಡಲು ವಿತ್ತ ಸಚಿವಾಲಯ ಮುಂದಾಗಿದೆ.

ಈ ನಿಟ್ಟಿನಲ್ಲಿ ಹಾಂಕಾಂಗ್‌ನಲ್ಲಿರುವ ಭಾರತದ ಬ್ಯಾಂಕ್‌ಗಳ ಶಾಖೆಗಳಿಗೆ ಪತ್ರ ಬರೆದಿರುವ ಸಚಿವಾಲಯ ಯಾವುದೇ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಿದೆ. ಬ್ಯಾಂಕ್‌ನ ಶಾಖೆಯಿಂದ ಹೊರಟ ಹಣ ವ್ಯಯಿಸಿದ ಹಣಕ್ಕೆ ಸಮನಾಗುವುದೇ ಎಂದು ಖಾತ್ರಿಪಡಸಿಕೊಳ್ಳಲು ಸೂಚಿಸಲಾಗಿದೆ.

ಇದೇ ವೇಳೆ 250 ಕೊಟಿ ರುಗಳಿಗಿಂತ ಹೆಚ್ಚಿನ ಸಾಲ ಮಂಜೂರು ಮಾಡುವ ಸಂದರ್ಭ ನಿಗಾ ಇಡಲು ವಿಶೇಷ ಪ್ರತಿನಿಧಿಯ ನೇಮಕ ಸೇರಿದಂತೆ ಇನ್ನೂ ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಅಲ್ಲದೇ ಸಾಲ ನೀಡುವ ಸಮೂಹದಲ್ಲಿ ಏಳು ಬ್ಯಂಕ್‌ಗಳಿಗಿಂತಲೂ ಹೆಚ್ಚಿರಬಾರದೆಂದು ಸೂಚಿಸಲಾಗಿದೆ.

ರೋಟೋಮ್ಯಾಕ್‌ ಕಾಂಡದ ರೂವಾರಿ ವಿಕ್ರಮ್‌ ಕೊಠಾರಿ ಕೂಡಾ ಏಳು ಬ್ಯಾಂಕ್‌ಗಳ ಸಮೂಹಕ್ಕೆ 3,695 ಕೋಟಿ ರುಗಳ ದ್ರೋಹವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಕಾಂಡಗಳ ಕುರಿತಂತೆ ವರದಿಯಾದ ಬಳಿಕ ವಿತ್ತ ಸಚಿವಾಲಯ ತೆಗೆದುಕೊಳ್ಳುತ್ತಿರುವ ಮೊದಲ ಹಂತದ ಕ್ರಮಗಳು ಇವಾಗಿವೆ. ವಂಚಕರ ಮೇಲೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗು ಸಿಬಿಐ ತನಿಖೆ ನಡೆಸುತ್ತಿವೆ. ಇದೇ ವೇಳೆ ಆರ್ಥಿಕ ಅಪರಾಧಗಳಿಗೆ ಸಾಥ್‌ ನೀಡದಿರಲು ಆಡಿಟರ್‌ಗಳಿಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಕೋರಿಕೊಂಡಿದ್ದರು.

Comments are closed.