ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಬ್ಯಾಂಕ್ ಮಾಜಿ ಡೆಪ್ಯೂಟಿ ಮ್ಯಾನೇಜರ್ ಸೇರಿ ಮೂವರನ್ನು ಬಂಧಿಸಿದ ಸಿಬಿಐ

Pinterest LinkedIn Tumblr

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್’ನ ಮಾಜಿ ಡಿಜಿಎಂ ಗೋಕುಲ್ ನಾಥ್ ಶೆಟ್ಟಿ ಸೇರಿದಂತೆ ಮೂವರನ್ನು ಸಿಬಿಐ ಅಧಿಕಾರಿಗಳ ತಂಡ ಶನಿವಾರ ಬಂಧನಕ್ಕೊಳಪಡಿಸಿದೆ.

ಗೋಕುಲ್ ನಾಥ್ ಶೆಟ್ಟಿ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್’ನ ಮನೋಜ್ ಕಾರತ್ ಹಾಗೂ ನೀರವ್ ಮೋದಿ ಗ್ರೂಪ್ ಆಫ್ ಫರ್ಮ್ಸ್’ನ ಹೇಮತ್ ಭಟ್ ಎಂಬುವವರನ್ನೂ ಸಿಬಿಐ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಮೂವರನ್ನು ಶನಿವಾರ ಹಾಜರುಪಡಿಸಲಿದ್ದಾರೆಂದು ತಿಳಿದುಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಪ್ರಕರಣ ಸಂಬಂಧ ಬ್ಯಾಂಕ್’ನ ಮಾಜಿ ಡಿಜಿಎಂ ಗೋಕುಲ್ ನಾಥ್ ಶೆಟ್ಟಿಯ ಮಲಾಡ್ ನಲ್ಲಿರುವ ಮನೆಗೆ ನಿನ್ನೆಯಷ್ಟೇ ಸಿಬಿಐ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಗೋಕುಲ್ ಅವರು ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ದಾಳಿ ಸಂದರ್ಭ ಜಾರಿ ನಿರ್ದೇಶನಾಲಯವು ರೂ.5,100 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಗಳನ್ನು ವಶಪಡಿಸಿಕೊಂಡಿತ್ತು. ಪ್ರಕರಣ ವಿಚಾರಣೆಗಳು ಹಾಗೂ ತನಿಖೆಗಳು ಮುಂದುವರೆದಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

Comments are closed.