ಹೊಸದಿಲ್ಲಿ: ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿಯೊಬ್ಬಳೆದುರು ಮಧ್ಯ ವಯಸ್ಸಿನ ವ್ಯಕ್ತಿಯೋರ್ವ ಹಸ್ತ ಮೈಥುನ ಮಾಡಿಕೊಂಡು ಆಕೆಯ ಸೊಂಟ ಮುಟ್ಟಿ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
“ಪ್ರಯಾಣಿಕರಿಂದ ತುಂಬಿದ್ದ ಬಸ್ಸಿನಲ್ಲಿ ನಾನು ಪ್ರಯಾಣಿಸುತ್ತಿದ್ದೆ; ನನ್ನ ಪಕ್ಕ ಕುಳಿತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ನನ್ನ ಮುಂದೆಯೇ ಹಸ್ತ ಮೈಥುನ ಮಾಡಿಕೊಂಡ; ನನಗದನ್ನು ಕಂಡು ಅಸಹ್ಯ ಅನ್ನಿಸಿತು, ಆತ ನನ್ನ ಸೊಂಟಕ್ಕೂ ಕೈಹಾಕಿ ಕಿರುಕುಳ ಕೊಟ್ಟ’ ಎಂದು ವಿದ್ಯಾರ್ಥಿನಿಯು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಹೇಳಿದ್ದಾಳೆ.
ಘಟನೆಯನ್ನು ಅನುಸರಿಸಿ ದಿಲ್ಲಿಯ ವಸಂತ ವಿಹಾರ್ ಪೊಲೀಸರು ಐಪಿಸಿ ಸೆ.354 (ಲೈಂಗಿಕ ಕಿರುಕುಳ),ಸೆ.354ಎ ಮತ್ತು 294ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎಫ್ಐಆರ್ ಪ್ರಕಾರ ಈ ಘಟನೆ ನಡೆದದದ್ದು ಫೆ.7ರಂದು – ವಸಂತ್ ಗ್ರಾಮ ಮತ್ತು ಐಐಟಿ ಗೇಟ್ ವರೆಗಿನ ಬಸ್ ಪ್ರಯಾಣದಲ್ಲಿ.
-ಉದಯವಾಣಿ