ರಾಷ್ಟ್ರೀಯ

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡ ತಮ್ಮನನ್ನು ಅಣ್ಣ ಏನು ಮಾಡಿದ ಗೊತ್ತಾ.?

Pinterest LinkedIn Tumblr

ಕೋಟಾ (ರಾಜಸ್ಥಾನ): ತನ್ನ ಪತ್ನಿಯೊಂದಿಗೆ ಸಹೋದರನೋರ್ವ ಅಕ್ರಮ ಸಂಬಂಧ ಹೊಂದಿದ್ದು ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಅಣ್ಣ ಆತನ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದ್ದಾಗಿ ತಿಳಿದು ಬಂದಿದೆ.

ಇಲ್ಲಿನ ಬುಂಡಿ ಜಿಲ್ಲೆಯ ತಾಲೇರಾ ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ 38 ವರ್ಷದ ತಮ್ಮನನ್ನು ಕಬ್ಬಿಣದ ರಾಡ್‌‌ನಿಂದ ಹೊಡೆದು ಅಣ್ಣ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮಹಿಳೆ ಸಹ ಗಾಯಗೊಂಡಿದ್ದು, ಕೋಟಾದಲ್ಲಿನ ಮಹಾರಾವ್ ಭೀಮ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಆರೋಪಿಯನ್ನ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ದಶ್ರಾತ್‌‌ ಸಿಂಗ್‌ ತಿಳಿಸಿದ್ದಾರೆ.

Comments are closed.