ರಾಷ್ಟ್ರೀಯ

ಪಠ್ಯ ಪುಸ್ತಕದಲ್ಲಿ ಝಾಕೀರ್ ನಾಯ್ಕ್‌: ವಿವಾದದ ಸುಳಿಯಲ್ಲಿ ಉ.ಪ್ರ ಶಾಲೆ

Pinterest LinkedIn Tumblr


ಬಿಜ್ನೋರ್‌: ಬಿಜ್ನೋರ್‌ನ ಧಾಕಿ ಗ್ರಾಮದಲ್ಲಿರುವ ಸರಕಾರಿ ಮಾನ್ಯತೆ ಪಡೆದ ಖಾಸಗಿ ಶಾಲೆಯೊಂದರಲ್ಲಿ ವಿವಾದಾತ್ಮಕ ಇಸ್ಲಾಮಿಕ್‌ ಬೋಧಕ ಝಾಕೀರ್ ನಾಯ್ಕ್‌ನ ಪುಸ್ತಕಗಳನ್ನು ಬೋಧಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತ ಆರೋಪಗಳನ್ನು ಸ್ವತಃ ಪರಿಶೀಲಿಸಲು ಬಿಜ್ನೋರ್‌ ಪ್ರಾಥಮಿಕ ಶಿಕ್ಷಣ ಅಧಿಕಾರಿ ತಂಡವೊಂದನ್ನು ಶಾಲೆಗೆ ಕಳುಹಿಸಿದ್ದು ತಪಾಸಣೆ ವೇಳೆ ಈ ದೂರು ನಿಜವೆಂದು ಗೊತ್ತಾಗಿದೆ.

ಶಾಲೆಯ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಪ್ರಸ್ತುತ ಢಾಕಾದಲ್ಲಿ ತಲೆಮರೆಸಿಕೊಂಡಿರುವ ಝಾಕೀರ್‌ ನಾಯಕ್‌ ವಿರುದ್ಧ ಹಲವು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಈತನ ಬೋಧನೆಗಳೇ 2016ರ ಢಾಕಾ ಭಯೋತ್ಪಾದಕ ದಾಳಿಗೆ ಪ್ರೇರಣೆ ಎಂಬುದು ಪತ್ತೆಯಾಗಿದೆ.

‘ತಾಲೂಕು ಶಿಕ್ಷಣಾಧಿಕಾರಿ ಶಿವಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಶಾಲೆಗೆ ಭೇಟಿ ನೀಡಿ ತಪಾಸಣೆ ನಡೆಸಿದೆ. ಆಗ ‘ಐಮ್ ಉನ್‌ ನಫೆ’ ಎಂಬ ಪಠ್ಯವನ್ನು 2ನೇ ತರಗತಿ ಮಕ್ಕಳಿಗೆ ಕಲಿಸಲಾಗುತ್ತಿತ್ತು. ಹಾಗಿದ್ದರೂ ಶಾಲೆಯಲ್ಲಿ ಪುಸ್ತಕದ ಪ್ರತಿ ಪತ್ತೆಯಾಗಿಲ್ಲ. ನಂತರ ಶಾಲೆಯ ಮಾಲೀಕರನ್ನು ತಂಡ ವಿಚಾರಣೆಗೆ ಗುರಿಪಡಿಸಿದೆ. ಈ ಪಠ್ಯದಲ್ಲಿ ಝಾಕೀರ್‌ ನಾಯ್ಕ್‌ ಕುರಿತ ಪಾಠವಿದೆ ಎಂದು ಶಾಲೆಯ ಮಾಲೀಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಈ ವಿಚಾರ ತನ್ನ ಗಮನಕ್ಕೆ ಬಂದ ಕೂಡಲೇ ಪಠ್ಯಪುಸ್ತಕವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವಿಚಾರಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ’ ಎಂದು ಪ್ರಾಥಮಿಕ ಶಿಕ್ಷಣಾಧಿಕಾರಿ ಮಹೇಶ್‌ ಚಂದ್ರ ತಿಳಿಸಿದರು.

-ಉದಯವಾಣಿ

Comments are closed.