ರಾಷ್ಟ್ರೀಯ

ಬೆನಿನ್‌ ಬಳಿ 22 ಭಾರತೀಯರಿದ್ದ ನೌಕೆ ನಾಪತ್ತೆ

Pinterest LinkedIn Tumblr


ಹೊಸದಿಲ್ಲಿ: 22 ಭಾರತೀಯ ನಾವಿಕರು ಹಾಗೂ ಗ್ಯಾಸೊಲಿನ್‌ ಇಂಧನ ಸಹಿತ ಸುಮಾರು 52 ಕೋಟಿ ರೂ. ಮೌಲ್ಯದ ಸರಕನ್ನು ತನ್ನೊಂದಿಗೆ ಹೊತ್ತು ಮುಂಬಯಿಯಿಂದ ಹೊರಟು ಪಾಶ್ಚಾತ್ಯ ದೇಶಗಳ ಕಡೆಗೆ ಪಯಣಿಸಿದ್ದ ಎಂ.ಟಿ.. ಮರೈನ್‌ ಎಕ್ಸ್‌ಪ್ರೆಸ್‌ ಎಂಬ ಹಡಗು, ಆಫ್ರಿಕಾದ ಪಶ್ಚಿಮ ರಾಷ್ಟ್ರವಾದ ಬೆನಿನ್‌ ಬಳಿ ನಾಪತ್ತೆಯಾಗಿದ್ದು, ಅಪಹರಣದ ಅನುಮಾನ ಹುಟ್ಟಿಸಿದೆ.

ಜನವರಿ 31 ರ ಬಳಿಕ ಹಡಗು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ. ಹಡಗಿನ ಸಿಬಂದಿಗಳ ಕುಟುಂಬಸ್ಥರು ತೀವ್ರ ಆತಂಕವಾಗಿದ್ದು ಹಡಗನ್ನು ಪತ್ತೆಹಚ್ಚಲು ನೆರವಾಗಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ತಿಂಗಳಿನಲ್ಲಿ ಸಾಪತ್ತೆಯಾದ 2ಹಡಗು ಇದಾಗಿದ್ದು, ಬೆನಿನ್‌ ಕರಾವಳಿಯಲ್ಲಿ ಅಪಹರಣಕಾರರು ಅಪಹರಿಸಿ 6 ದಿನಗಳ ಬಳಿಕ ಬಿಡುಗಡೆ ಮಾಡಿದ್ದರು.

-ಉದಯವಾಣಿ

Comments are closed.