ರಾಷ್ಟ್ರೀಯ

ಫುಟ್‌ಪಾತ್‌ನಲ್ಲಿ ವಾಸವಾಗಿದ್ದ ನಿವೃತ್ತ ಸೇನಾಧಿಕಾರಿಯ ಹತ್ಯೆ

Pinterest LinkedIn Tumblr


ಪುಣೆ: ನಗರದ ಕ್ಯಾಟೋನ್ಮೆಂಟ್ ಸಮೀಪದ ಫುಟ್‌ಪಾತ್‌ ಮೇಲೆ ನಿವೃತ ಸೇನಾಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿಯಾದ ರವೀಂದ್ರ ಬೇಲಿ (65) ಕುಟುಂಬದಿಂದ ದೂರವಾಗಿ ಪುಣೆಯ ಸೇನಾ ದಂಡು ಪ್ರದೇಶ ಸಮೀಪದ ಫುಟ್‌ಪಾತ್ ಮೇಲೆ ಜೀವನ ಸಾಗಿಸುತ್ತಿದ್ದರು. ಆದರೆ, ಕಳೆದ ರಾತ್ರಿ ದುಷ್ಕರ್ಮಿಗಳಿಬ್ಬರು ಅವರ ಮೇಲೆ ಭೀಕರ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.

ಘಟನೆಯನ್ನು ಸೆಕ್ಯುರಿಟಿ ಗಾರ್ಡ್‌ಯೊಬ್ಬರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಲಷ್ಕರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಣದಾಸೆಗೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಬಾಲಿಯವರು 1970ರ ಬ್ಯಾಚ್‌ನ ಅಧಿಕಾರಿಯಾಗಿದ್ದು, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಎಂಜನಿಯರಿಂಗ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಇವರು ಕೆಲವು ಐಟಿ ಕಂಪೆನಿಗಳಲ್ಲಿಯೂ ಸಹ ಸೇವೆ ಸಲ್ಲಿಸಿದರು ಎಂದು ತಿಳಿದುಬಂದಿದೆ. ಆದರೆ, ಕುಟುಂಬದಿಂದ ದೂರವಾಗಿ ಪುಣೆಯ ಕಂಟೋನ್ಮೆಂಟ್ ಸಮೀಪದ ಫುಟ್‌ಪಾತ್ ಮೇಲೆ ಆಶ್ರಯ ಪಡೆದಿದ್ದರು. ಇದುವರೆಗೂ ಬಾಲಿಯವರ ಶವ ಪಡೆಯಲು ಯಾವ ಸಂಬಂಧಿಕರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.5ರಂದು ಪುಣೆಯ ಸಾಸೂನ್ ಆಸ್ಪತ್ರೆ ಆವರಣದಲ್ಲಿ ರವೀಂದ್ರ ಬೇಲಿಯವರ ಅಂತ್ಯಸಂಸ್ಕಾರ ನಡೆಯಲಿದೆ.

-ಉದಯವಾಣಿ

Comments are closed.