ರಾಷ್ಟ್ರೀಯ

2005ಕ್ಕೂ ಮೊದಲೇ ಜನಿಸಿದ ಮಹಿಳೆಯರಿಗೂ ಆಸ್ತಿಯಲ್ಲಿ ಸಮಪಾಲು ಪಡೆಯುವ ಅವಕಾಶ: ಸುಪ್ರೀಂ

Pinterest LinkedIn Tumblr

ನವದೆಹಲಿ: ಹಿಂದೂ ಉತ್ತರಾಧಿಕಾರಿ ಕಾಯ್ದೆ 2005ರ ಪ್ರಕಾರ ಮಹಿಳೆಯರಿಗೂ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಪುರುಷರು ಮತ್ತು ಮಹಿಳೆಯರ ಮಧ್ಯೆ ಸಮಾನತೆ ಕಾಯ್ತುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ನೀಡಿದ್ದು 2005ರ ಹಿಂದೂ ಉತ್ತರಾಧಿಕಾರಿ ಕಾಯ್ದೆ ಜಾರಿಗೆ ಬರುವುದಕ್ಕೂ ಮುನ್ನ ಅಂದರೆ 2005ಕ್ಕೂ ಮೊದಲೇ ಜನಿಸಿದ ಮಹಿಳೆಯರಿಗೂ ಆಸ್ತಿಯಲ್ಲಿ ಸಮಪಾಲು ಪಡೆಯುವ ಅವಕಾಶವಿದೆ.

2005ಕ್ಕೂ ಮೊದಲು ಮಹಿಳೆ ಜನಿಸಿದ್ದಳು ಎಂಬ ಕಾರಣಕ್ಕೆ ತವರು ಮನೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಾರದು ಎಂದು ಪೀಠ ಹೇಳಿದೆ. ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕರ್ನಾಟಕದ ಬಾಗಲಕೋಟೆಯ ಇಬ್ಬರು ಸೋದರಿಯರು ಪ್ರಕರಣದಲ್ಲಿ ಪೀಠ ಈ ತೀರ್ಪು ನೀಡಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ತಳ್ಳಿಹಾಕಿದೆ.

Comments are closed.