ರಾಷ್ಟ್ರೀಯ

ಎಕ್ಸಾಂ ವಾರಿಯರ್ಸ್‌: ಇದು ಮೋದಿ ಬುಕ್‌

Pinterest LinkedIn Tumblr


ಹೊಸದಿಲ್ಲಿ: ಪರೀಕ್ಷೆ ಸಂದರ್ಭದಲ್ಲಿ ಅತಿ ಹೆಚ್ಚು ಒತ್ತಡಕ್ಕೆ ಗುರಿಯಾಗುವ ಮಕ್ಕಳಿಗೆ ಪರಿಹಾರ ಕಂಡುಕೊಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಒತ್ತಡ ನಿವಾರಿಸುವ ಎಕ್ಸಾಂ ವಾರಿಯರ್ಸ್‌ ಎಂಬ ಪುಸ್ತಕವನ್ನು ತಾವೇ ಸ್ವತಃ ಬರೆದು ಬಿಡುಗಡೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಇನ್ನೇನು ಪರೀಕ್ಷೆಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಎಲ್ಲಾ ರೀತಿಯ ಒತ್ತಡಗಳಿರುತ್ತವೆ. ಹೀಗೆ ಒತ್ತಡ ಹಾಗೂ ಇದರಿಂದ ಖಿನ್ನತೆಗೊಳಗಾಗುವ ಮಕ್ಕಳ ಕುರಿತಾಗಿ ಯೋಚಿಸುವ ಮೋದಿ ಕಳೆದ ವರ್ಷ ತಮ್ಮ ಮಾಸಿಕ ಕಾರ್ಯಕ್ರಮ ‘ಮನ್​ ಕೀ ಬಾತ್’ನಲ್ಲೂ ಮಾತನಾಡಿದ್ದರು.

ಪ್ರಸಕ್ತ ಮೋದಿ ಮನದ ಮಾತು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ಈ ಪುಸ್ತಕದಲ್ಲಿ ಸರಳ ಹಾಗೂ ವ್ಯಾವಹಾರಿಕ ಸಲಹೆ ನೀಡುವುದರೊಂದಿಗೆ, ಖುದ್ದು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬುದನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ.

Non-preachy, practical and thought-provoking, Exam Warriors by @narendramodi is a handy guide for students in India and across the world. #CoverReveal #TheCountdownBegins pic.twitter.com/UNCX0uKus2
— Penguin India (@PenguinIndia) January 31, 2018

ಬೋಧನೆ, ಪ್ರಾಯೋಗಿಕ ಮತ್ತು ಚಿಂತನೆಗೆ-ಪ್ರಚೋದಿಸುವ ರೀತಿಯಲ್ಲಿ ಈ ಪುಸ್ತಕವನ್ನು ರೂಪಿಸಲಾಗಿದ್ದು ಸದ್ಯ ಶನಿವಾರ ಬಿಡುಗಡೆಗೊಂಡ ಪುಸ್ತಕ ಆಂಗ್ಲಾ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗೂ ಈ ಪುಸ್ತಕವನ್ನು ಭಾಷಾಂತರ ಮಾಡಲಾಗುತ್ತದೆ ಎಂದು ಪ್ರಕಾಶಕ ಪೆಂಗ್ವಿನ್‌ ಇಂಡಿಯಾ ಹೇಳಿಕೊಂಡಿದೆ.

Exam prep just got more fun #ExamWarriors

Releasing tomorrow at 4pm pic.twitter.com/h7r2LWLmfb
— Exam Warriors (@examwarriors) February 2, 2018

ಈ ಪುಸ್ತಕವನ್ನು ಸಂವಾದದಂತೆ ಬರೆಯಲಾಗಿದ್ದು ಇದರಲ್ಲಿ ಹಲವಾರು ಚಟುವಟಿಕೆಗಳನ್ನು ನೀಡಲಾಗಿದೆ. ಇದಕ್ಕಾಗಿ ಸ್ಥಳವನ್ನೂ ನೀಡಿದ್ದಾರೆ. ಈ ಮೂಲಕ ಶಾಲಾ ಮಕ್ಕಳನ್ನು ತನ್ನತ್ತ ಸೆಳೆಯುವುದರೊಂದಿಗೆ, ತಲ್ಲೀನಗೊಳ್ಳುವಂತೆ ಮಾಡುತ್ತದೆ.

Comments are closed.