ರಾಷ್ಟ್ರೀಯ

ರಾಜಸ್ಥಾನದಲ್ಲಿ ಮೂರು ಉಪಚುನಾವಣೆ: ಬಿಜೆಪಿಗೆ ಮೂರರಲ್ಲೂ ಸೋಲು

Pinterest LinkedIn Tumblr


ಜೈಪುರ: ಪದ್ಮಾವತ್‌ ಚಿತ್ರದ ವಿವಾದದೊಂದಿಗೆ ರಾಜಸ್ಥಾನದಲ್ಲಿ ಉಂಟಾಗಿದ್ದ ರಾಜಕೀಯ ಫೈಟ್‌ನಲ್ಲಿ ಅಂತಿಮವಾಗಿ ಕಾಂಗ್ರೆಸ್‌ ಜಯ ಸಾಧಿಸಿದ್ದು, ವರ್ಷಾಂತ್ಯಕ್ಕೆ ನಡೆಯುವ ವಿಧಾನ ಸಭಾ ಚುನಾವಣೆಗೆ ಜನರ ಉತ್ತರ ದೊರಕಿದೆ.

ಬಿಜೆಪಿ ಸಂಸದರ ಅಕಾಲಿಕ ನಿಧನದಿಂದ ಅಜ್ಮೀರ ಮತ್ತು ಅಲ್ವರ್‌ ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ನಡೆದಿದ್ದ ಉಪ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಅಲ್ವರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕರಣ್‌ ಸಿಂಗ್‌ ಯಾಧವ್‌ 1.97 ಲಕ್ಷ ಮತಗಳಿಂದ ಗೆದ್ದರೆ, ಅಜ್ಮೀರದಲ್ಲಿ ಮತ್ತೋರ್ವ ಕಾಂಗ್ರೆಸ್‌ ಅಭ್ಯರ್ಥಿ ರಾಘು ಶರ್ಮಾ ಗೆದ್ದು ಬಿಜೆಪಿ ಸೋಲಿನ ಬಿಸಿ ನೀಡಿದ್ದಾರೆ.

ಇದಲ್ಲದೇ ರಾಜಸ್ಥಾನದ ಒಂದು ವಿಧಾನಸಭಾ ಕ್ಷೇತ್ರ ಮಂಡಲಗಢ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ವಿವೇಕ್ ಧಾಕಡ್ ಅವರು 12,976 ಮಂತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಈ ಚುನಾವಣೆಯ ಫಲಿತಾಂಶ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಸ್ಥಾನಿಗಳ ಒಲುವು ಯಾರ ಕಡೆಯಿದೆ ಎಂದು ತಿಳಿಯಲು ಈ ಚುನಾವಣೆ ಫಲಿತಾಂಶ ಸಹಕಾರಿಯಾಗಿದೆ.

Comments are closed.