ರಾಷ್ಟ್ರೀಯ

ಬಾನಂಗಳದಲ್ಲಿ ಅಪರೂಪದ ಗ್ರಹಣ… ಕೆಂಪು ಬಣ್ಣಕ್ಕೆ ತಿರುಗಿದ ಚಂದ್ರ

Pinterest LinkedIn Tumblr

ನವದೆಹಲಿ: ಬಾನಂಗಳದಲ್ಲಿ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ.

35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದ್ದು, ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮ ಅಮೆರಿಕ, ಈಸ್ಟ್ ಕೋಸ್ಟ್, ರಷ್ಯಾ, ಯುರೋಪ್, ದಕ್ಷಿಣ ಅಮೆರಿಕದ ಬಹುತೇಕ ಪ್ರದೇಶ, ಆಫ್ರಿಕಗಳಲ್ಲಿಯೂ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದೆ.

35 ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸುತ್ತಿದ್ದು, ವಿಶೇಷ ಚಂದ್ರ ಗ್ರಹಣವನ್ನು ನಾಸಾ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಿತ್ತು. ಇಂತಹ ಚಂದ್ರಗ್ರಹಣ ಕೊನೆಯ ಬಾರಿಗೆ 1866ರ ಮಾರ್ಚ್ 31 ರಂದು ಘಟಿಸಿತ್ತು. ಇದಾದ ಬಳಿಕ 150 ವರ್ಷಗಳ ಬಳಿಕ ಘಟಿಸಿದೆ. ಇಂತಹ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ

Comments are closed.