ರಾಷ್ಟ್ರೀಯ

ಪ್ರಸಿದ್ಧ ರಾಮಾಲ್ಲಾಗೆ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ ನಿರೀಕ್ಷೆಯಲ್ಲಿ ಪ್ಯಾಲೆಸ್ಟೀನಿಯರು!

Pinterest LinkedIn Tumblr


ನವದೆಹಲಿ: ಭಾರತವು ಉದಯಿಸುತ್ತಿರುವ ಆರ್ಥಿಕ ಶಕ್ತಿ ಎಂದು ಹೇಳಿರುವ ಪ್ಯಾಲೆಸ್ಟೀನ್ ನ ಅಧಿಕಾರಿ, ಮುಂದಿನ ತಿಂಗಳ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೀನ್ ಭೇಟಿಯಿಂದ ಎರಡೂ ಕಡೆಗಳ ನಡುವೆ ಆರ್ಥಿಕ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

ಫೆಬ್ರವರಿ 10ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೀನ್, ಯುಎಇ ಮತ್ತು ಒಮನ್ ತ್ರಿರಾಷ್ಟ್ರಗಳಿ ಭೇಟಿ ನೀಡುತ್ತಿದ್ದು ಈ ಮಧ್ಯೆ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಣ ಸಂಘರ್ಷಕ್ಕೆ ಕಾರಣವಾಗಿರುವ ಪ್ರಸಿದ್ಧ ರಾಮಾಲ್ಲಾಗೆ ಭೇಟಿ ನೀಡುತ್ತಿದ್ದು ಇದು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದೊಂದು ಐತಿಹಾಸಿಕ ಭೇಟಿಯಾಗಲಿದ್ದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಲಿವೆ ಎಂಬ ಭರವಸೆ ಇದೆ ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮುದ್ ಅಬ್ಬಾಸ್ ರಾಜತಾಂತ್ರಿಕ ಸಲಹೆಗಾರ ಡಾ. ಮಜೀದ್ ಖಾಲ್ದಿ ಅವರು ಹೇಳಿದ್ದಾರೆ.

ಸಾಂಪ್ರದಾಯಿಕವಾಗಿ, ನಾವು ಭಾರತದಿಂದ ಬಲವಾದ ರಾಜಕೀಯ ಬೆಂಬಲವನ್ನು ಪಡೆದಿದ್ದೇವೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಾಲ್ಲಾಗೆ ಭೇಟಿ ನೀಡಿದರೆ ಆಗ ನಮ್ಮ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ದೃಷ್ಟಿಯಿಂದ ನಾವು ನೋಡುತ್ತೇವೆ ಎಂದರು.

ಪ್ರಸ್ತುತ ಭಾರತ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹೆಚ್ಚುತ್ತಿರುವ ಆರ್ಥಿಕ ಮಹಾಶಕ್ತಿಯಿಂದಾಗಿ ಪ್ರತಿಯೊಬ್ಬರೂ ಭಾರತದ ಜತೆ ಸೇರಿಕೊಳ್ಳಲು ಯೋಜಿಸುತ್ತಿದ್ದಾರೆ. ಈಗಿನ ಉತ್ತಮ ಸಂಬಂಧಗಳನ್ನು ಮೀರಿ ಭಾರತದೊಂದಿಗೆ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ನಾವು ಭರವಸೆ ಹೊಂದಿದ್ದೇವೆ ಎಂದು ಮಜೀದ್ ಖಾಲ್ದಿ ತಿಳಿಸಿದ್ದಾರೆ.

Comments are closed.