ರಾಷ್ಟ್ರೀಯ

ಲೈಂಗಿಕ ಸುರಕ್ಷತೆ; ಅವಿವಾಹಿತ ಮಹಿಳೆಯರಲ್ಲಿ ಕಾಂಡೋಮ್ ಬಳಕೆ ಹೆಚ್ಚಳ!

Pinterest LinkedIn Tumblr


ನವದೆಹಲಿ: ಅವಿವಾಹಿತ ಮಹಿಳೆಯರು ಇದೀಗ ಲೈಂಗಿಕ ಸುರಕ್ಷತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಡೋಮ್ ಮೊರೆ ಹೋಗಿರುವುದಾಗಿ ಆರೋಗ್ಯ ಸಚಿವಾಲಯ 2015-16ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ಬಯಲಾಗಿದೆ.

15ರಿಂದ 49 ವರ್ಷದ ಅವಿವಾಹಿತರು ಲೈಂಗಿಕ ಚಟುವಟಿಕೆ ವೇಳೆ ಕಾಂಡೋಮ್ ಅನ್ನು ಬಳಕೆ ಮಾಡೋದು ಹೆಚ್ಚಾಗಿದ್ದು, ಕಳೆದ 10 ವರ್ಷಗಳಲ್ಲಿ ಕಾಂಡೋಮ್ ಬಳಕೆ ಶೇ.2ರಿಂದ ಶೇ.12ಕ್ಕೆ ಹೆಚ್ಚಳವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ಪ್ರಕಾರ, 20ರಿಂದ 24ವರ್ಷದ ಅವಿವಾಹಿತ ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಂಡೋಮ್ ಉಪಯೋಗಿಸುತ್ತಿದ್ದಾರೆ ಎಂದು ಹೇಳಿದೆ. ಗರ್ಭನಿರೋಧಕ ಬಳಸುವುದು “ಮಹಿಳೆಯರ ಕೆಲಸ” ಎಂಬುದಾಗಿ ಎಂಬುದಾಗಿ 8 ಮಂದಿ ಪುರುಷರಲ್ಲಿ ಮೂರು ಮಂದಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ವಿವರಿಸಿದೆ.

ದೇಶಾದ್ಯಂತ ಗರ್ಭ ನಿರೋಧಕ ಬಳಸುವ ಕುರಿತ ತಿಳಿವಳಿಕೆ ವಿಚಾರದಲ್ಲಿ ಇದೊಂದು ಸಂತಸದ ವಿಚಾರವಾಗಿದೆ. 15ರಿಂದ 49ವರ್ಷದ ವಯೋಮಿತಿಯ ವಿವಾಹಿತ ಮಹಿಳೆಯರು ಮತ್ತು ಪುರುಷರು ಶೇ.99ರಷ್ಟು ಗರ್ಭ ನಿರೋಧಕ ಬಳಸುವ ತಿಳಿವಳಿಕೆ ಹೊಂದಿರುವುದಾಗಿ ಸಮೀಕ್ಷೆ ಹೇಳಿದೆ. ಇಷ್ಟೆಲ್ಲಾ ಜಾಗೃತಿ ಇದ್ದರೂ ಕೂಡಾ ಶೇ.10ರಷ್ಟು ಮಾತ್ರ ಅತ್ಯಾಧುನಿಕ ಗರ್ಭನಿರೋಧಕ ಬಳಸುತ್ತಿದ್ದಾರೆ. ಬಹುಸಂಖ್ಯೆಯ ಮಹಿಳೆಯರು ಈಗಲೂ ಸಾಂಪ್ರದಾಯಿಕ ಗರ್ಭನಿರೋಧಕ ಬಳಕೆ ಮಾಡುತ್ತಿದ್ದಾರೆ.

-ಉದಯವಾಣಿ

Comments are closed.