ರಾಷ್ಟ್ರೀಯ

14 ತಿಂಗಳ ಗರಿಷ್ಠ ಮಟ್ಟಕ್ಕೆ ಚಿನ್ನ; 10 ಗ್ರಾಮ್‌ ಗೆ 34,450 ರೂ.

Pinterest LinkedIn Tumblr


ಹೊಸದಿಲ್ಲಿ : ಚಿನ್ನದ ಧಾರಣೆ ಇಂದು ಗುರುವಾರ ಗ್ರಾಮಿಗೆ 350 ರೂ. ಏರಿದ್ದು ಆ ಮೂಲಕ ಅದು 14 ತಿಂಗಳ ಗರಿಷ್ಠ ಮಟ್ಟವಾಗಿ 10 ಗ್ರಾಂ ಗೆ 31,450 ರೂ.ಗೆ ತಲುಪಿದೆ.

ಇದೇ ರೀತಿ ಬೆಳ್ಳಿಯ ಧಾರಣೆ ಕೂಡ ಕೆಜಿಗೆ 1,100 ರೂ. ಜಿಗಿದಿದ್ದು 41,000 ರೂ. ಮಟ್ಟಕ್ಕೇರಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ಟಂಕಸಾಲೆಯವರು ಹೆಚ್ಚಿನ ಬೇಡಿಕೆಯನ್ನು ಮುಂದಿಟ್ಟದ್ದೇ ಈ ಪಾಟಿ ಏರಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆ ಏರಲು ಸಾಗರೋತ್ತರ ಧಾರಣೆಯಲ್ಲಿ ಸ್ಥಿರತೆ ಕಂಡು ಬಂದಿರುವುದು ಮತ್ತು ಡಾಲರ್‌ ಮೂರು ವರ್ಷಗಳ ಕನಿಷ್ಠ ವಿನಿಮಯ ದರಕ್ಕೆ ಕುಸಿದಿರುವುದೇ ಕಾರಣವಾಗಿದೆ.

-ಉದಯವಾಣಿ

Comments are closed.