ರಾಷ್ಟ್ರೀಯ

ಜಗತ್ತಿನ ಬಲಿಷ್ಠ ನಾಯಕರನ್ನು ಹಿಂದಿಕ್ಕಿದ ಮೋದಿ; ಮೂರನೇ ಜಾಗತಿಕ ನಾಯಕ

Pinterest LinkedIn Tumblr

ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಜಿನ್ ಪಿಂಗ್ ರನ್ನು ಹಿಂದಿಕ್ಕಿ ಮೂರನೇ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ.

ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯನ್ನು ಗ್ಯಾಲಪ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ್ದು ಇದರಲ್ಲಿ ಪ್ರಧಾನಿ ಮೋದಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೋದಿ ಜಗತ್ತಿನ ಪ್ರಬಲ ನಾಯಕರನ್ನು ಹಿಂದಿಕ್ಕಿ ಗಮನ ಸಳೆದಿದ್ದಾರೆ.

ಇನ್ನು ಜಗತ್ತಿನ ಜನಪ್ರಿಯ ನಾಯಕರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಜಿನ್ ಪಿಂಗ್ ಐದನೇ ಸ್ಥಾನದಲ್ಲಿದ್ದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 11ನೇ ಸ್ಥಾನ ಪಡೆದಿದ್ದಾರೆ.

ಗ್ಯಾಲ್ಲಪ್ ಸಮೀಕ್ಷೆಯು ಬಿಜೆಪಿ 2018ರ ಚುನಾವಣಾ ಪ್ರಚಾರದ ಸಾಲಿಗೆ ಮತ್ತಷ್ಟು ಉತ್ತೇಜನ ನೀಡಲಿದ್ದು ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆ ಇದೆ. ಭಾರತದ ಚುನಾವಣಾ ಇತಿಹಾಸದಲ್ಲಿ ಪ್ರಧಾನಿ ಮೋದಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಬಂದರೆ ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರೂ ಅವರಿಗೆ ಸಮನಾದ ಸ್ಥಾನವನ್ನು ಬಿಜೆಪಿಯಿಂದ ಪಡೆದಿದ್ದಾರೆ.

Comments are closed.