ರಾಷ್ಟ್ರೀಯ

ಯುವತಿಯೊಂದಿಗೆ ಓಡಿಹೋದ ಯುವಕನ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಯುವತಿ ಕಡೆಯವರು !

Pinterest LinkedIn Tumblr

ಲಕ್ನೋ: ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯ ಕಡೆಯವರು ಯುವಕನ ಕುಟುಂಬದವರನ್ನು ಅಪಹರಿಸಿ, ಆತನ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.

ಸಂತ್ರಸ್ತ ಮಹಿಳೆ ಭೋಪುರಾ ಗ್ರಾಮದ ನಿವಾಸಿಯಾಗಿದ್ದು ನೋಜಲ್ ಗ್ರಾಮಕ್ಕೆ ಕರೆದೊಯ್ದಿದ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ 26 ವರ್ಷದ ಮಗ ಘಾಜಿಯಾಬಾದ್‍ನಲ್ಲಿ ಓದುತ್ತಿದ್ದು, ತನ್ನ ಕ್ಲಾಸ್‍ಮೇಟ್ ಆಗಿದ್ದ 24 ವರ್ಷದ ಯುವತಿ ಜೊತೆ ನವೆಂಬರ್ 20ರಂದು ಓಡಿಹೋಗಿದ್ದರು. ಇವರಿಬ್ಬರು ಪ್ರೀತಿಸಿಕೊಂಡಿದ್ದರು.

ಡಿಸೆಂಬರ್ 19ರಂದು ಯುವತಿಯ ಮನೆಯವರು ಯುವಕನ ತಾಯಿ, ತಂದೆ, ಅಣ್ಣ ಹಾಗೂ ಮತ್ತೊಬ್ಬ ಸಹೋದರ ಸಂಬಂಧಿಯನ್ನು ಅಪಹರಿಸಿದ್ದಾರೆ. ಒಂದು ವಾರದ ವರೆಗೆ ಕಿರುಕುಳ ನೀಡಿದ್ದಾರೆ. ಡಿಸೆಂಬರ್ 25ರಂದು ಖಚಿತ ಮಾಹಿತಿ ಸಿಕ್ಕ ನಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ.

ನಂತರ ಸಂತ್ರಸ್ತೆ ನಡೆದ ಘಟನೆಯನ್ನ ವಿವರಿಸಿದ್ದು, ಯುವತಿಯ ತಂದೆ ಹಾಗೂ ಇಬ್ಬರು ಚಿಕ್ಕಪ್ಪಂದಿರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಘಟನೆಯ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.