ರಾಷ್ಟ್ರೀಯ

107ರ ಅಜ್ಜಿಗೆ ರಾಹುಲ್ ಗಾಂಧಿ ಕಂಡ್ರೆ ಇಷ್ಟವಂತೆ! ಕಾರಣ ಏನು ಗೊತ್ತಾ?!

Pinterest LinkedIn Tumblr


ನವದೆಹಲಿ: ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿಯನ್ನು ಅವರ ರಾಜಕೀಯ ನಾಯಕತ್ವಕ್ಕಿಂತ ಹೆಚ್ಚು ಸೌಂದರ್ಯಕ್ಕೆ ಮರುಳಾದ ಎಷ್ಟೋ ಮಂದಿಯಿದ್ದಾರೆ. ಇದೀಗ 107 ರ ಅಜ್ಜಿಯೂ ಆ ಸಾಲಿಗೆ ಸೇರಿದ್ದಾಳೆ!

ಟ್ವಿಟರ್ ನಲ್ಲಿ ದೀಪಾಲಿ ಸಿಕಂದ್ ಎಂಬ ಮಹಿಳೆ ತನ್ನ 107 ವರ್ಷದ ಅಜ್ಜಿಯ ಜನ್ಮ ದಿನ ಎಂದು ಬರೆದುಕೊಂಡಿದ್ದಲ್ಲದೆ, ಆಕೆಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡುವುದು ಆಕೆಯ ಏಕೈಕ ಆಸೆ ಎಂದಿದ್ದಾಳೆ. ಯಾಕೆ ಎಂದು ಕೇಳಿದ್ದಕ್ಕೆ ಅವಳು ಮೆಲು ಧ್ವನಿಯಲ್ಲಿ ‘ಆತ ತುಂಬಾ ಸುಂದರಾಂಗ’ ಎಂದಿದ್ದಾಳೆ ಎಂದು ಅಜ್ಜಿಯ ಫೋಟೋ ಸಮೇತ ಬರೆದುಕೊಂಡಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ‘ಡಿಯರ್ ದೀಪಾಲಿ, ನಿಮ್ಮ ಅಜ್ಜಿಗೆ ನಮ್ಮ ಕಡೆಯಿಂದ ಹುಟ್ಟುಹಬ್ಬ ಮತ್ತು ಕ್ರಿಸ್ ಮಸ್ ಶುಭಾಷಯ ತಿಳಿಸಿ. ಅವರಿಗೆ ನನ್ನ ಕಡೆಯಿಂದ ಒಂದು ಪ್ರೀತಿಯ ಅಪ್ಪುಗೆ ನೀಡಿ’ ಎಂದರು. ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.

Comments are closed.