ರಾಷ್ಟ್ರೀಯ

ಜೈನ ಮಠದಲ್ಲಿ ಆನೆ ದಾಳಿಗೆ ಸಿಲುಕಿದ ಸ್ವಾಮೀಜಿ ಸಾವು

Pinterest LinkedIn Tumblr

ಮುಂಬೈ: ಮಹಾರಾಷ್ಟ್ರದ ಜಯಸಿಂಗ್’ಪುರದಲ್ಲಿರುವ ನಂದಾನಿ ಮಠಕ್ಕೆ ಸೇರಿದ ಆನೆಯೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆನೆ ದಾಳಿಗೆ ಸಿಲುಕಿದ ಜಿನಸೇನೆ ಭಟ್ಟಾರಕ ಮಹಾಸ್ವಾಮೀಜಿ (78) ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಭಟ್ಟಾರಕ ಸ್ವಾಮೀಜಿ ಆನೆಗೆ ಮೇವು ನೀಡಲು ಹೋಗಿದ್ದರು. ಈ ವೇಳೆ ಆನೆ ಸೊಂಡಿನಿಂದ ರಭಸದಿಂದ ಹೊಡೆದಿದೆ. ಬಳಿಕ ಸ್ವಾಮೀಜಿ ಕೆಳಗೆ ಬಿದ್ದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಕಲ್ಲಿನ ಮೇಲೆ ಸ್ವಾಮೀಜಿಯವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಕೂಡಲೇ ಸ್ವಾಮೀಜಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಹಸಿ ಮೇವು ತರುವ ಸಲುವಾಗಿ ಮಾವುತ ಹೋಗಿದ್ದ. ಆದರೆ ಸಾಕಷ್ಟು ಸಮಯವಾದರೂ ಮಾವುತ ಬಂದಿರಲಿಲ್ಲ. ಹೀಗಾಗಿ ಸ್ವಾಮೀಜಿಗಳೇ ತಾವೇ ಆನೆಗೆ ಮೇವನ್ನು ನೀಡಲು ಹೋಗಿದ್ದರು. ಈ ವೇಳೆ ಕೋಪಗೊಂಡಿದ್ದ ಆನೆ ಸೊಂಡಿನಿಂದ ಹಿಡಿದು 3-4 ಬಾರಿ ಅಪ್ಪಳಿಸಿತ್ತು. ಬಳಿಕ ಸ್ವಾಮೀಜಿಯವರು ಕಲ್ಲಿನ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Comments are closed.