ರಾಷ್ಟ್ರೀಯ

ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಮುನ್ನಡೆ, ಸ್ಪಷ್ಟ ಬಹುಮತದತ್ತ ಆಡಳಿತಾರೂಢ ಪಕ್ಷ

Pinterest LinkedIn Tumblr

ನವದೆಹಲಿ: ಬಹು ನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಅಂಚೆಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಇತ್ತೀಚಿನ ವರದಿ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವ ಸೂಚನೆಗಳು ಗೋಚರಿಸುತ್ತಿವೆ.

ಪ್ರಾರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ ಬಹುಮತದತ್ತ ಮುನ್ನಡೆ ಸಾಧಿಸಿತ್ತು, ನಂತರದ ಕೆಲವು ಕ್ಷಣಗಳಲ್ಲಿ ಕಾಂಗ್ರೆಸ್ ಬಹುಮತದತ್ತ ಮುನ್ನಡೆ ಸಾಧಿಸಿತ್ತು. ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನ್ನು ಹಿಂದಿಕ್ಕಿ ಬಿಜೆಪಿ ಮತ್ತೆ ಮುನ್ನಡೆ ಸಾಧಿಸಿದ್ದು, ಗುಜರಾತ್ ನ ಚುನಾವಣಾ ಫಲಿತಾಂಶ ಈ ಬಾರಿ ಹಿಂದೆಂದಿಗಿಂತಲೂ ಕುತೂಹಲ ಮೂಡಿಸಿದ್ದು, ಊಹೆಗೂ ನಿಲುಕದಂತಾಗಿದೆ.

Comments are closed.