ರಾಷ್ಟ್ರೀಯ

ಮತ್ತೆ ಬರಲಿದೆ ಏರ್‌ಡೆಕ್ಕನ್‌ 1 ರೂ. ವಿಮಾನಯಾನ!

Pinterest LinkedIn Tumblr


ನವದೆಹಲಿ: ಈ ಹಿಂದೆ ಒಂದು ರೂಪಾಯಿ ಮೌಲ್ಯದ ಪ್ರಯಾಣ ಸೇವೆಯನ್ನು ನೀಡುವ ಮೂಲಕ ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ್ದ ಏರ್‌ ಡೆಕ್ಕನ್‌ ವಿಮಾನ ಸಂಸ್ಥೆ, ಶೀಘ್ರದಲ್ಲೇ ಮತ್ತೂಮ್ಮೆ ಅದೇ ಸೇವೆಯನ್ನು ನೀಡುವುದಾಗಿ ಘೋಷಿಸಿದೆ.

2003ರಲ್ಲಿ ಜಿ.ಆರ್‌. ಗೋಪಿನಾಥ್‌ ಅವರಿಂದ ಸ್ಥಾಪನೆಗೊಂಡಿದ್ದ ಏರ್‌ ಡೆಕ್ಕನ್‌, ಆನಂತರ, 2008ರಲ್ಲಿ ವಿಜಯ್‌ ಮಲ್ಯ ಅವರ ಕಿಂಗ್‌μಶರ್‌ ಏರ್‌ಲೈನ್ಸ್‌ನಲ್ಲಿ ಸಮ್ಮಿಳಿತಗೊಂಡಿತ್ತು. ಆದರೆ, ಕಿಂಗ್‌ಫಿಶರ್‌ ಏರ್‌ ಲೈನ್ಸ್‌ ನಷ್ಟಕ್ಕೊಳಗಾಗಿದ್ದರಿಂದ ಏರ್‌ ಡೆಕ್ಕನ್‌ ಕೂಡಾ ನೆಲಕಚ್ಚಿತ್ತು. ಇದೀಗ, ಪುಟಿದೆದ್ದಿರುವ ಏರ್‌ ಡೆಕ್ಕನ್‌, ಡಿ.22ರಿಂದ ಪುನಃ ಕಾರ್ಯಾರಂಭ ಮಾಡಲಿದ್ದು, “ಉಡಾನ್‌’ ಯೋಜನೆಯಡಿ ದೆಹಲಿ, ಮುಂಬೈ, ಕೋಲ್ಕತಾ, ಶಿಲ್ಲಾಂಗ್‌ ನಡುವೆ ಸೇವೆ ನೀಡಲಿದೆ.

-ಉದಯವಾಣಿ

Comments are closed.