ರಾಷ್ಟ್ರೀಯ

ಶಿಸ್ತು ಕಲಿಸಿದ ಮೌಲ್ವಿ ಸಾಬ್‌ರನ್ನು ನೆನೆದು ಭಾವುಕರಾದ ರಾಜನಾಥ್‌ ಸಿಂಗ್‌

Pinterest LinkedIn Tumblr


ಲಖನೌ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ತಮಗೆ ಉತ್ತಮ ಬದುಕಿನ ದಾರಿ ತೋರಿಸಿದ ಗುರುಗಳನ್ನು ನೆನೆದು ಕೆಲ ಕ್ಷಣ ಭಾವುಕರಾದ ಘಟನೆ ನಡೆದಿದೆ.

ಲಖನೌ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವ ರಾಜ್‌ನಾಥ್‌ ಸಿಂಗ್‌, ತಮ್ಮ ಬಾಲ್ಯದ ಗುರುಗಳಾದ ಮೌಲ್ವಿ ಸಾಬ್‌ರನ್ನು ನೆನೆದು ಭಾವುಕರಾದರು. ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಮೌಲ್ವಿ ಸಾಬ್‌ ತಮಗೆ ಹಾಗೂ ತಮ್ಮ ಸಹಪಾಠಿಗಳಿಗೆ ಬಾಲ್ಯದಲ್ಲಿ ಶಿಸ್ತು ರೂಪಿಸಿಕೊಳ್ಳುವುದಕ್ಕಾಗಿ ಥಳಿಸುತ್ತಿದ್ದರು.

ಆದರೆ ರಾಜನಾಥ್‌ ಉತ್ತರಪ್ರದೇಶದ ಸಚಿವರಾಗಿ ತನ್ನೂರಿಗೆ ಮೊದಲ ಬಾರಿ ತೆರಳಿದಾಗ ಮೌಲ್ವಿಯವರೇ ಅವರ ಸ್ವಾಗತಕ್ಕೆ ಹಾರ ಹಿಡಿದು ನಿಂತಿದ್ದರಂತೆ. ‘ನಾನು ಶಿಕ್ಷಣ ಸಚಿವನಾದ ಸಂದರ್ಭದಲ್ಲಿ ನನ್ನೂರಿಗೆ ಕಾರಿನಲ್ಲಿ ತೆರಳಿದ್ದೆ, ಈ ವೇಳೆ 90ರ ವೃದ್ಧರೊಬ್ಬರು ಹಾರವನ್ನು ಹಿಡಿದು ನಿಂತಿದ್ದರು, ಪರಿಚಿತ ಮುಖವನ್ನು ನೋಡಿದ ಕೂಡಲೇ ಇವರೇ ನಮ್ಮ ಶಿಕ್ಷಕರು ಎಂದು ತಿಳಿಯಿತು. ಕೂಡಲೇ ಕಾರು ನಿಲ್ಲಿಸಿ ಅವರ ಬಳಿ ತೆರಳಿ ನಾನು ಹಾಕಿಸಿಕೊಳ್ಳಬೇಕಾದ ಹಾರವನ್ನು ಗುರುಗಳಿಗೆ ಹಾಕಿ ಗೌರವ ಸಮರ್ಪಿಸಿದೆ. ಬಳಿಕ ನಾನು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ ಈ ವೇಳೆ ಅವರು ಕಣ್ಣೀರಿಟ್ಟರು. ಆ ಕ್ಷಣ ನನ್ನನ್ನು ತುಂಬಾ ಭಾವುಕನ್ನನ್ನಾಗಿಸಿತ್ತು’ ಎಂದು ರಾಜನಾಥ್‌ ಸಿಂಗ್‌ ತಮ್ಮ ಬಾಲ್ಯದ ಗುರುವನ್ನು ನೆನೆದರು.

“ತಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಮೌಲವಿ ಸರ್‌ ಭೌತಶಾಸ್ತ್ರ ಪಾಠ ಮಾಡುತ್ತಿದ್ದರು. ಶಿಸ್ತು ತಪ್ಪಿದಲ್ಲಿ ಅವರು ಬೆತ್ತದಿಂದ ಬಾರಿಸುತ್ತಿದ್ದರು. ಅವರು ಶಿಕ್ಷಿಸಿದ ಬಳಿಕ ನಾವು ಒಳ್ಳೆಯದ್ದನ್ನೇ ಮಾಡುತ್ತಿದ್ದೇವು, ಹೀಗಾಗಿ ನಾವು ಘನತೆಯನ್ನು ಹೆಚ್ಚಿಸಿಕೊಳ್ಳಬೇಕು. ಘನತೆ ಬೆಳೆಸಿಕೊಂಡರೆ ಮಾತ್ರಾ ನಾವು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯ’ ಎಂದು ಸಚಿವ ಮಕ್ಕಳಿಗೆ ಕಿವಿಮಾತು ಹೇಳಿದರು.

Comments are closed.