ರಾಷ್ಟ್ರೀಯ

ಏರ್‌ಟೆಲ್-ಇಂಟೆಕ್ಸ್‌ ಮಗದೊಂದು 4ಜಿ ಸ್ಮಾರ್ಟ್‌ಫೋನ್ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಮೇರಾ ಪೆಹ್ಲಾ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿರುವ ದೇಶದ ಟೆಲಿಕಾಂ ದಿಗ್ಗಜ ಏರ್‌ಟೆಲ್, ಇಂಟೆಕ್ಸ್ ಸಹಭಾಗಿತ್ವದಲ್ಲಿ ಮಗದೊಂದು 4ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಅದುವೇ,

ಅಕ್ವಾ ಲಯನ್ಸ್ ಎನ್1

ಈ ಮೂಲಕ ಇಂಟೆಕ್ಸ್ ಅಕ್ವಾ ಎ4 ಮತ್ತು ಎಕ್ವಾ ಎಸ್3 ಶ್ರೇಣಿಗೆ ಮಗದೊಂದು ಸ್ಮಾರ್ಟ್‌ಫೋನ್ ಸೇರ್ಪಡೆಯಾಗಿದೆ.

ಬೆಲೆ, ಪ್ರಯೋಜನ

3149 ರೂ. ಡೌನ್ ಪೇಮೆಂಟ್ ಮಾಡಿ ಇಂಟೆಕ್ಸ್ ಅಕ್ವಾ ಲಯನ್ಸ್ ಎನ್1 ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು. ಅಲ್ಲದೆ ಏರ್‌ಟೆಲ್‌ಗೆ 36 ತಿಂಗಳುಗಳ ಕಾಲ ನಿರಂತರವಾಗಿ ಮಾಸಿಕ 169 ರೂ.ಗಳ ರಿಚಾರ್ಜ್ ಮಾಡಿಸಬೇಕು.

18 ತಿಂಗಳುಗಳ ಬಳಿಕ ಗ್ರಾಹಕರಿಗೆ 500 ರೂ. ಮತ್ತು 36 ತಿಂಗಳುಗಳ ಬಳಿಕ ಮಗದೊಂದು 1000 ರೂ.ಗಳ ರಿಫಂಡ್ ದೊರಕಲಿದೆ. ಈ ಮೂಲಕ ಒಟ್ಟು 1500 ರೂ.ಗಳ ಉಳಿತಾಯ ಮಾಡಬಹುದಾಗಿದೆ. ಅಂದರೆ ಇಂಟೆಕ್ಸ್ ಅಕ್ವಾ ಲಯನ್ಸ್ ಎನ್1 ಸ್ಮಾರ್ಟ್‌ಫೋನ್‌ನ ಪರಿಣಾಮಕಾರಿ ಬೆಲೆ 1649 ರೂ.ಗಳಾಗಿರಲಿದೆ.

ವಿಶೇಷತೆಗಳು:
ಆಂಡ್ರಾಯ್ಡ್ 7.0 ನೌಗಾಟ್
ಫುಲ್ ಟಚ್ 4 ಇಂಚುಗಳ WVGA ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್,
800x480p ಡಿಸ್‌ಪ್ಲೇ ರೆಸೊಲ್ಯೂಷನ್,
1.1 GHz MTK ಪ್ರೊಸೆಸರ್,
ಡ್ಯುಯಲ್ ಸಿಮ್

ಏರ್‌ಟೆಲ್ ಆ್ಯಪ್: ಮೈಏರ್‌ಟೆಲ್ ಆ್ಯಪ್, ಏರ್‌ಟೆಲ್ ಟಿವಿ, ವಿಂಕ್ ಮ್ಯೂಸಿಕ್ ಇತ್ಯಾದಿ.

ಬ್ಯಾಟರಿ: 1400mAh
ಸ್ಟೋರೆಜ್:
1GB RAM,
8GB ಮೆಮರಿ,
128 ಜಿಬಿ ವರೆಗೂ ವರ್ಧಿಸಬಹುದು

ಕ್ಯಾಮೆರಾ: 2MP ರಿಯರ್ ಮತ್ತು 0.3MP ಫ್ರಂಟ್ ಕ್ಯಾಮೆರಾ
ಕನೆಕ್ಟಿವಿಟಿ: 4G/3G/2G ಜತೆ Airtel VoLTE, Wi-Fi, Bluetooth, GPS

Comments are closed.