ಹೊಸದಿಲ್ಲಿ: ಗುಜರಾತ್ ಚುನವಾಣೆ ಸಂಬಂಧವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಪ್ರಶ್ನೆಗಳ ಸರಣಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಈ ಸರಣಿಯ 7ನೇ ಪ್ರಶ್ನೆಯನ್ನು ಕೇಳಿದ್ದಾರೆ.
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರವೇ ಸೇವೆ ಸಲ್ಲಿಸುತ್ತಿದೆಯೇ ಎಂದು ರಾಹುಲ್ ತನ್ನ 7ನೇ ಪ್ರಶ್ನೆಯಲ್ಲಿ ವ್ಯಂಗ್ಯವಾಡಿದ್ದಾರೆ.
“ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ ಜೀವನವನ್ನು ದುರ್ಭರಗೊಳಿಸಿದೆ. ನೋಟ್ ಬಂದಿ ಮತ್ತು ಜಿಎಸ್ಟಿ ಬಳಿಕ ಮೋದಿ ಸರಕಾರ ಕೇವಲ ಜುಮ್ಲಾ ಸರಕಾರವಾಗಿದೆ. ಜನಸಾಮಾನ್ಯರನ್ನು ನಿರ್ಲಕ್ಷಿಸಿದ ಸಿರಿವಂತರ ಸರಕಾರವಾಗಿದೆ’ ಎಂದು ರಾಹುಲ್ ತಮ್ಮ ಟ್ವಿಟರ್ ಬರಹದಲ್ಲಿ ಟೀಕಿಸಿದರು.
ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಡಿ.9ರಂದು ಮತ್ತು 2ನೇ ಹಂತದ ಚುನಾವಣೆ ಡಿ.14ರಂದು ನಡೆಯಲಿದೆ. ಡಿ.18ರಂದು ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳ ಮತ ಎಣಿಕೆ ಜತೆಜತೆಗೆ ನಡೆಯಲಿದೆ.
-ಉದಯವಾಣಿ