ರಾಷ್ಟ್ರೀಯ

ಗೂಗಲ್ ತೇಜ್ ಬಳಕೆದಾರರಿಗೆ ಗುಡ್ ನ್ಯೂಸ್

Pinterest LinkedIn Tumblr


ಹೊಸದಿಲ್ಲಿ: ಆನ್‍ಲೈನ್‍ನಲ್ಲಿ ಬ್ಯಾಂಕ್ ಖಾತೆಯಿಂದ ನಗದನ್ನು ಸುಲಭವಾಗಿ ಇತರರಿಗೆ ರವಾನಿಸಲು ಸಾಧ್ಯವಾಗುವಂತೆ ಈ ವರ್ಷ ಸೆಪ್ಟೆಂಬರ್‍‍ನಲ್ಲಿ ಗೂಗಲ್ ಪರಿಚಯಿಸಿದ ‘ತೇಜ್’ ಆ್ಯಪ್‌ ಮಹತ್ವದ ಬದಲಾವಣೆಗಳೊಂದಿಗೆ ಹೊರಬರುತ್ತಿದೆ. ಈಗಾಗಲೆ ಸ್ಕ್ರ್ಯಾಚ್ ಕಾರ್ಡ್ ಮೂಲಕ ತುಂಬಾ ಜನಪ್ರಿಯವಾದ ಈ ಆ್ಯಪ್‌ ಇಷ್ಟು ದಿನಗಳ ಕಾಲ ಕೇವಲ ಇತರರಿಗೆ ಹಣ ಕಳುಹಿಸಲು ಮಾತ್ರ ಉಪಯೋಗವಾಗುತ್ತಿತ್ತು. ಇದೀಗ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ.

ಇನ್ನು ಮುಂದೆ ತೇಜ್ ಆ್ಯಪ್‌ ಮೂಲಕ ರೀಚಾರ್ಜ್, ಬಿಲ್ ಪೇಮೆಂಟ್ಸ್ ಸಹ ಮಾಡಬಹುದಾದ ಸೌಲಭ್ಯ ಬರಲಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಸೌಲಭ್ಯ ಎಲ್ಲರಿಗೂ ಹಂತಹಂತವಾಗಿ ಲಭ್ಯವಾಗಲಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ‘ಗೂಗಲ್ ಫಾರ್ ಇಂಡಿಯಾ’ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ನೀಡಲಾಯಿತು.

ಇನ್ನು ಮುಂದೆ ತೇಜ್ ಆ್ಯಪ್‌ ಮೂಲಕ ವಿದ್ಯುತ್, ನೀರಿನ ಬಿಲ್ ಜತೆಗೆ ಡಿಟಿಎಚ್ ರೀಚಾರ್ಜ್‍ನಂತಹ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದರ ಜತೆಗೆ ಗೂಗಲ್ ಮುಖ್ಯವಾದ ನಿರ್ಧಾರವನ್ನೂ ಪ್ರಕಟಿಸಿದೆ. ಜಿಯೋ ಹೊರತಂದಿರುವ ಅತ್ಯಂತ ಕಡಿಮೆ ಬೆಲೆಯ 4ಜಿ ಫ್ಯೂಚರ್ ಫೋನ್‍ಗೆ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ನೀಡುತ್ತಿರುವುದಾಗಿ ಪ್ರಕಟಿಸಿದೆ.

ಕೇವಲ ಭಾರತೀಯರನ್ನು ಉದ್ದೇಶಿಸಿ ತಂದಿರುವ ಈ ಅಸಿಸ್ಟೆಂಟ್ ಹಿಂದಿ, ಆಂಗ್ಲ ಭಾಷೆಯಲ್ಲಿ ಕೆಲಸ ಮಾಡುತ್ತದೆ. ಇದರಿಂದ ಫೋನ್ ಕರೆಗಳು, ಟೆಕ್ಸ್ಟ್ ಮೆಸೇಜ್‍ಗಳು, ಮ್ಯೂಸಿಕ್ ಪ್ಲೇ ಮಾಡಿಕೊಳ್ಳಬಹುದೆಂದು ಗೂಗಲ್ ತಿಳಿಸಿದೆ. ಇದೇ ಕಾರ್ಯಕ್ರಮದಲ್ಲಿ ಆಂಡ್ರಾಯ್ಡ್ ಓರಿಯೋ (ಗೋ ಎಡಿಷನ್), ಗೂಗಲ್ ಗೋ ಆ್ಯಪ್‌‍ಗಳನ್ನು ಅನಾವರಣಗೊಳಿಸಲಾಯಿತು.

Comments are closed.