ರಾಷ್ಟ್ರೀಯ

ಸಿಗರೇಟು ಪ್ಯಾಕಲ್ಲೇ ಚಟ ಬಿಡಿಸುವ ಹೆಲ್ಪ್‌ ಲೈನ್‌ ನಂಬರ್‌!

Pinterest LinkedIn Tumblr


ಹೊಸದಿಲ್ಲಿ: ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಪ್ಯಾಕೇಟುಗಳಲ್ಲಿರುವ ಎಚ್ಚರಿಕೆ ಸಂದೇಶದ ಚಿತ್ರಗಳನ್ನು ಇನ್ನಷ್ಟು ದೊಡ್ಡದಾಗಿ ಪ್ರಕಟಿಸಲು, ಎಚ್ಚರಿಕೆ ಬರಹವನ್ನು ದೊಡ್ಡದಾಗಿ ಮುದ್ರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಜತೆಗೆ ತಂಬಾಕು ಚಟ ಬಿಡಿಸುವ ಹೆಲ್ಪ್‌ ಲೈನ್‌ ನಂಬರ್‌ನ್ನು ಪ್ಯಾಕೇಟುಗಳನ್ನೇ ಮುದ್ರಿಸುವ ಬಗ್ಗೆ ಯೋಚಿಸಲಾಗುತ್ತಿದೆ.

ರಾಷ್ಟ್ರೀಯ ತಂಬಾಕು ವ್ಯಸನಮುಕ್ತಿ ಕ್ವಿಟ್‌ಲೈನ್‌-1800 227787, ಟೋಲ್‌ ಫ್ರೀ ನಂಬರ್‌ನ್ನು ಪ್ಯಾಕೇಟ್‌ನಲ್ಲೇ ಮುದ್ರಿಸಲು ಚಿಂತನೆ ನಡೆದಿದೆ.

ತಂಬಾಕು ಉತ್ಪನ್ನಗಳ ಪ್ಯಾಕೇಟುಗಳ ಮೇಲ್ಭಾಗದಲ್ಲಿ ಶೇಕಡಾ 85 ಜಾಗದಲ್ಲಿ ಪ್ರದರ್ಶಿಸಬೇಕೆಂದು 2015ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿತ್ತು. ಈ ಆದೇಶ 2016ರ ಏಪ್ರಿಲ್‌ 1ರಿಂದ ಜಾರಿಗೆ ಬಂದಿತ್ತು.

ಇದೀಗ ಪ್ಯಾಕೇಟ್‌ನಲ್ಲಿ ಕ್ವಿಟ್‌ ಲೈನ್‌ ನಂಬರ್‌ ಸೇರ್ಪಡೆ, ಚಿತ್ರದ ಗಾತ್ರಗಳ ಹೆಚ್ಚಳದ ಜತೆಗೆ ತಂಬಾಕು ಸೇವನೆಯಿಂದ ಬರುವ ರೋಗಗಳನ್ನೂ ನಮೂದಿಸಲು ಚಿಂತಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದರು.

ತಂಬಾಕು ಉತ್ಪನ್ನ ಬಳಕೆ ಇಳಿಮುಖ

ದೇಶದಲ್ಲಿ ಯುವಜನತೆ ತಂಬಾಕು ಉತ್ಪನ್ನ ಬಳಸುವ ಪ್ರಮಾಣ ಶೇಕಡಾ 6ರಷ್ಟು ಕಡಿಮೆಯಾಗಿರುವುದನ್ನು ಜಾಗತಿಕ ವಯಸ್ಕರ ತಂಬಾಕು ಬಳಕೆ ಸಮೀಕ್ಷೆ ಗುರುತಿಸಿದೆ. 2009-10ರಲ್ಲಿ ದೇಶದ ವಯಸ್ಕರಲ್ಲಿ 34.6 % ಮಂದಿ ತಂಬಾಕು ಉತ್ಪನ್ನ ಬಳಸುತ್ತಿದ್ದರೆ 2016-17ರಲ್ಲಿ ಅದು ಶೇ. 28.6ಕ್ಕೆ ಇಳಿದಿದೆ. 2009-10ಕ್ಕೆ ಹೋಲಿಸಿದರೆ ದೇಶದಲ್ಲಿ ತಂಬಾಕು ಬಳಕೆ 81 ಲಕ್ಷದಷ್ಟು ಕಡಿಮೆಯಾಗಿದೆ.

15ರಿಂದ 24 ವರ್ಷದ ಯುವಕರಲ್ಲಿ ತಂಬಾಕು ಬಳಕೆ 18.4ರಿಂದ 12.4 ಶೇಕಡಾಕ್ಕೆ ಇಳಿದಿದೆ.

ಇದೇ ವೇಳೆ, ತಂಬಾಕು ಉತ್ಪನ್ನ ಸೇವನೆ ಆರಂಭದ ಸರಾಸರಿ ವಯಸ್ಸು 17.9ರಿಂದ 18.9ಕ್ಕೇರಿದೆ.

ದೇಶದಲ್ಲಿ ತಂಬಾಕು ಉತ್ಪನ್ನ ಬಳಸುವವರ ಸಂಖ್ಯೆ

26.7 ಕೋಟಿ (28.6%)

ಪುರುಷರ ಪ್ರಮಾಣ: 29.6 %

ಮಹಿಳೆಯರರು: 2 %

Comments are closed.