ರಾಷ್ಟ್ರೀಯ

ಶೀಘ್ರ ಬರಲಿದೆ ವಾಟ್ಸ್‌ಆ್ಯಪ್‌ “ನಿರ್ಬಂಧಿತ ಗ್ರೂಪ್‌’ ಸೌಲಭ್ಯ

Pinterest LinkedIn Tumblr


ಹೊಸದಿಲ್ಲಿ: ಅಕ್ಟೋಬರ್‌ನಿಂದೀಚೆಗೆ ತನ್ನ ಗ್ರೂಪ್‌ ಸೇವೆಗಳಲ್ಲಿ ಕೆಲವಾರು ಹೊಸ ಸೌಲಭ್ಯಗಳನ್ನು ನೀಡಲಾರಂಭಿಸಿರುವ ವಾಟ್ಸ್‌ಆ್ಯಪ್‌ ಸಂಸ್ಥೆ, ಇದೀಗ, “ರಿಸ್ಟ್ರಿಕ್ಟೆಡ್‌ ಗ್ರೂಪ್ಸ್‌’ ಎಂಬ ಹೊಸ ಸೌಲಭ್ಯವುಳ್ಳ ಗ್ರೂಪ್‌ಗ್ಳನ್ನು ಸೃಷ್ಟಿಸುವ ಅವಕಾಶ ನೀಡಲಿದೆ.

ಇದು ವಾಟ್ಸ್‌ಆ್ಯಪ್‌ನ “2.17.430 ಬೀಟಾ’ ವರ್ಷನ್‌ನಲ್ಲಿ ಸಿಗಲಿದ್ದು, ಇದರಲ್ಲಿ ಕೇವಲ ಗ್ರೂಪ್‌ ಅಡ್ಮಿನ್‌ ಮಾತ್ರ ತನ್ನ ಗುಂಪಿನ ಸದಸ್ಯರಿಗೆ ಸಂದೇಶ ಅಥವಾ ಮೀಡಿಯಾ ಫೈಲ್‌ಗ‌ಳನ್ನು ಕಳುಹಿಸ ಬಹುದಾಗಿರುತ್ತದೆ. ಅಂದರೆ, ಅಡ್ಮಿನ್‌ ಮಾತ್ರ ತನ್ನ ಗುಂಪಿನ ಸದಸ್ಯರಿಗೆ ಪಠ್ಯ ಸಂದೇಶ, ಫೋಟೋ, ವಿಡಿಯೋ, ಜಿಫ್ ಫೈಲ್‌ಗ‌ಳು, ಇತರ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದು. ಆದರೆ, ಗುಂಪಿನ ಸದಸ್ಯರು ಓದಬಹುದು, ನೋಡಬಹುದಷ್ಟೆ. ಅವಕ್ಕೆ ಪ್ರತಿಕ್ರಿಯೆ ನೀಡುವ ಅವಕಾಶ ಇರುವುದಿಲ್ಲ.

ಒಂದೇ ಮಾತಿನಲ್ಲಿ ಹೇಳುವುದಾದರೆ, ಇದೊಂದು ಏಕಮುಖ ಸಂಚಾರ (ಒನ್‌ ವೇ ಟ್ರಾಫಿಕ್‌) ಮಾದರಿಯ ಕಾರ್ಯವೈಖರಿ ಆಗಿರಲಿದೆ.

-ಉದಯವಾಣಿ

Comments are closed.