ರಾಷ್ಟ್ರೀಯ

ಅಂಬೇಡ್ಕರ್ ಗೆ ಬುದ್ದನ ಸಂದೇಶ ತಿಳಿಸಿದ್ದ ಬೌದ್ದ ಸನ್ಯಾಸಿ ಪ್ರಗ್ಯಾನಂದ ಇನ್ನಿಲ್ಲ

Pinterest LinkedIn Tumblr


ಲಖ್ನೋ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ವರಿಗೆ ಬುದ್ದ್ನ ಬೋಧನೆ ಹಾಗೂ ಬೌದ್ಧ ಧರ್ಮದ ಕುರಿತು ಅರಿವು ಮೂಡಿಸಿದ್ದ ಬೌದ್ಧ ಸನ್ಯಾಸಿ ಪ್ರಗ್ಯಾನಂದ (90) ಲಖ್ನೋ ದಲ್ಲಿ ನಿಧನರಾಗಿದ್ದಾರೆ.

ಉಸಿರಾಟದ ತೊಂದರೆ ಹಾಗೂ ಎದೆ ನೋವು ಕಾಣಿಸಿಕೊಂಡ ಕಾರಣ ಅವರು ಚಿಕಿತ್ಸೆಗಾಗಿ ಲಖ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಟ್ರಾಂ ಸೆಂಟರ್ ಗೆ ದಾಖಲಾಗಿದ್ದರು.

1942ರಲ್ಲಿ ಭಾರತಕ್ಕೆ ಬಂದಿದ್ದ ಪ್ರಗ್ಯಾನಂದ 1956, ಏಪ್ರಿಲ್ 14ರಂದು ಅಂಬೇಡ್ಕರ್ ಅವರಿಗೆ ಬೌದ್ಧ ಧರ್ಮದ ಕುರಿತು ಬೋಧಿಸಿದ್ದರು. ಅಂದು ಏಳು ಮಂದಿ ಬೌದ್ಧ ಸನ್ಯಾಸಿಗಳ ತಂಡ ಅಂಬೇಡ್ಕರ್ ಅವರಿಗೆ ಬುದ್ದನ ಜೀವನ ದರ್ಶನ ಹಾಗೂ ಬೌದ್ಧ ಧರ್ಮದ ಬಗೆಗೆ ತಿಳಿವು ಮೂಡಿಸಿತ್ತು. ಶ್ರೀಲಂಕಾದಲ್ಲಿ ಜನಿಸಿದ್ದ ಪ್ರಗ್ಯಾನಂದ ಲಖ್ನೋ ಬುದ್ದ ವಿಹಾರದಲ್ಲಿದ್ದ ಅತ್ಯಂತ ಹಿರಿಯ ಬೌದ್ದ ಸನ್ಯಾಸಿ ಆಗಿದ್ದರು.

Comments are closed.