ಕರಾವಳಿ

ವಯಸ್ಸಾದವರಿಗೆ ಎಫ್‍ಎಬಿಪಿ3 ಪ್ರೋಟೀನ್ ಬಳಸಿ ಹೃದಯಾಘಾತದ ಅಪಾಯ ತಿಳಿಯಲು ಸಾಧ್ಯ

Pinterest LinkedIn Tumblr

ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಬದಲಾದ ಜೀವನ ಶೈಲಿ ಕಾರಣ ಯುಕ್ತ ವಯಸ್ಸಿನಲ್ಲೇ ಬಹಳಷ್ಟು ಮಂದಿ ಹೃದಯಾಘಾತದಿಂದ ಮರಣಿಸುತ್ತಿದ್ದಾರೆ. ಹೃದಯಾಘಾತ ಬಂದವರಿಗೆ ಎಷ್ಟು ಬೇಗ ಚಿಕಿತ್ಸೆ ನೀಡಿದರೆ ಅಷ್ಟು ಬೇಗ ಬದುಕುವ ಸಾಧ್ಯತೆಗಳು ಇರುತ್ತವೆ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿದರೂ ಆ ಮನುಷ್ಯನ ಪ್ರಾಣಕ್ಕೆ ಅಪಾಯ. ಆದರೆ ಆ ಹೃದಯಾಘಾತ ಯಾವ ಸಮಯದಲ್ಲಿ.. ಎಂತಹ ಪರಿಸ್ಥಿತಿಯಲ್ಲಿ ಬರುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ.. ಆದರೆ ಈ ಮಹಾಮಾರಿಯನ್ನು ತಾನು ಕಂಡುಹಿಡಿದ ಸಲಕರಣೆ ಮೂಲಕ ಆರು ಗಂಟೆ ಮೊದಲೇ ಗ್ರಹಿಸಬಹದು ಎನ್ನುತ್ತಿದ್ದಾರೆ 16 ವರ್ಷದ ಬಾಲಕ ಆಕಾಶ್ ಮನೋಜ್.

ತಮಿಳುನಾಡಿನ ಆಕಾಶ್ ಹತ್ತನೇ ತರಗತಿ ಓದುತ್ತಿದ್ದಾನೆ. ಹೃದಯಾಘಾತ ಬರುವ ಸೂಚನೆಯನ್ನು ತಾನು ಕಂಡುಹಿಡಿದ ಹೊಸ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಿದ್ದಾನೆ. ಈ ಸಲಕರಣೆಯನ್ನು ಕಂಡುಹಿಡಿದ ಆಕಾಶ್ ’ಇನ್ನೋವೇಷನ್ ಸ್ಕಾಲರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂ’ ನಡಿ ರಾಷ್ಟ್ರಪತಿ ಕೈಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.

ಈ ಸಂದರ್ಭದಲ್ಲಿ ಆಕಾಶ್ ಮಾತನಾಡುತ್ತಾ.. “ನಿಶ್ವಬ್ದವಾಗಿ ಬರುವ ಹೃದಯಾಘಾತ ಈ ನಡುವೆ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿ ಮೇಲ್ಮೋಟಕ್ಕೆ ಆರೋಗ್ಯವಾಗಿ ಕಾಣಿಸುತ್ತಾರೆ. ಹೃದಯಾಘಾತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳೂ ಅವರಲ್ಲಿ ಕಾಣಿಸಲ್ಲ. ನಮ್ಮ ತಾತ ಆರೋಗ್ಯವಾಗಿ ಕಾಣಿಸುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು. ತಾತನ ಸಾವು ನನ್ನಲ್ಲಿ ತುಂಬಾ ನೋವುಂಟು ಮಾಡಿತು. ಹೃದಯಾಘಾತವನ್ನು ಮೊದಲೇ ಕಂಡುಹಿಡಿಯುವ ಸಲಕರಣೆ ಯಾವುದಾದರೂ ತಯಾರಿಸಬೇಕು ಎಂದುಕೊಂಡೆ. ಹಾಗಾಗಿ ಈ ಸಲಕರಣೆ ಕಂಡುಹಿಡಿದೆ. ಆದರೆ ಇದನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಾಗಿದೆ. ದೇಹದ ಮೇಲೆ ಯಾವುದೇ ಗಾಯ ಮಾಡದಂತೆ ಇದನ್ನು ಉಪಯೋಗಿಸಬಹುದು” ಎಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಸಂದರ್ಭದಲ್ಲಿ ತಿಳಿಸಿದ್ದಾರೆ.

’ರಕ್ತದಲ್ಲಿರುವ ಎಫ್‍ಎಬಿಪಿ3 ಎಂಬ ಸಣ್ಣ ಪ್ರೋಟೀನ್ ಬಳಸಿಕೊಂಡು ಹೃದಯಾಘಾತದ ಅಪಾಯವನ್ನು ತಿಳಿದುಕೊಳ್ಳಬಹುದು’ ಎಂದು ಆಕಾಶ್ ತಿಳಿಸಿದ್ದಾನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಈ ಸಲಕರಣೆ ಅದೆಷ್ಟೋ ಉಪಯುಕ್ತವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಮೊದಲೇ ಗ್ರಹಿಸಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದ್ದಾನೆ ಆ ಬಾಲಕ. ಈ ಸಲಕರಣೆಯನ್ನು ತಜ್ಞರ ಸಹಾಯದಿಂದ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತೆ ಮಾಡಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು..!

Comments are closed.