ಕ್ರೀಡೆ

ಧೋನಿ ಬ್ಯಾಟ್ ಬೀಸಲು ಹೋಗುತ್ತಿದ್ದಂತೆ ಇತ್ತ ಮಗಳು ಎದುರಿಗಿದ್ದವರನ್ನು ಚಿವುಟಿ ಸುದ್ದಿಯಾಗಿದ್ದಾಳೆ !

Pinterest LinkedIn Tumblr

ಚೆನ್ನೈ: ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂತೆಯೇ ಅತ್ತ ಮೈದಾನದಲ್ಲಿ ಧೋನಿ ಪುತ್ರಿ ಜೀವಾಳ ತುಂಟಾಟ ಕೂಡ ಮುಂದುವರೆದಿದೆ.

ಕಳೆದೆರಡು ದಿನಗಳ ಹಿಂದೆ ಇದೇ ಜೀವಾ ತನ್ನ ತಂದೆಗೆ ಐದು ಭಾಷೆಗಳಲ್ಲಿ ಉತ್ತರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಇದೇ ಜೀವಾ ಮೈದಾನದಲ್ಲಿ ಮಾಡುತ್ತಿರುವ ತುಂಟಾಟದ ವಿಡಿಯೋಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ತಂಡಗಳ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ವೇಳೆಯಲ್ಲೂ ತನ್ನ ತಂದೆಯನ್ನು ಹುರಿದುಂಬಿಸುವುದಕ್ಕೆ ಕ್ರೀಡಾಂಗಣಕ್ಕೆ ಆಗಮಿಸಿದ್ದ ಜೀವಾ ತನ್ನ ತುಂಟಾಟದ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾಳೆ.

https://www.instagram.com/p/Bve40usAuNG/?utm_source=ig_embed&utm_campaign=embed_video_watch_again

ಧೋನಿ ಕ್ರೀಸ್ ಗೆ ಹೋಗುತ್ತಿದ್ದಂತೆಯೇ ಗೋ ಪಾಪಾ.. ಗೋ ಎಂದು ಕೂಗಿ ಅವರನ್ನು ಹುರಿದುಂಬಿಸಿದ್ದಳು. ಬಳಿಕ ಪಾಪಾ.. ಕಮಾನ್ ಪಾಪಾ ಎಂದು ಕೂಗುತ್ತಲೇ ಎದುರಿಗಿದ್ದ ವ್ಯಕ್ತಿಯ ಚಿವುಟಿದ್ದಾಳೆ. ಈ ವಿಡಿಯೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Comments are closed.