ರಾಷ್ಟ್ರೀಯ

ಮಧ್ಯಪ್ರದೇಶ: ವ್ಯಕ್ತಿಯ ಹೊಟ್ಟೆಯಿಂದ 5 ಕೆಜಿಯಷ್ಟು ಕಬ್ಬಿಣ ವಸ್ತುಗಳನ್ನು ಹೊರತೆಗೆದ ವೈದ್ಯರು!

Pinterest LinkedIn Tumblr


ಭೋಪಾಲ್: ಮಧ್ಯಪ್ರದೇಶದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯೊಂದು ನಡೆದಿದ್ದು, ರೇವಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 5 ಕೆ.ಜಿ ಕಬ್ಬಿಣದ ವಸ್ತುಗಳನ್ನು ಹೊರತೆಗೆದಿದ್ದಾರೆ. ಈ ಪೈಕಿ 263 ಕಾಯಿನ್ ಗಳು ಹಾಗೂ ಶೇವಿಂಗ್ ಬ್ಲೇಡ್ ಗಳಿವೆ.

32 ವರ್ಷದ ಮೊಹಮ್ಮದ್ ಮಕ್ಸೂದ್ ಎಂಬಾತನನ್ನು ಸರ್ಕಾರಿ ಸ್ವಾಮ್ಯದ ಸಂಜಯ್ ಗಾಂಧಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಹೊಟ್ಟೆನೋವಿನ ಕಾರಣದಿಂದ ದಾಖಲಿಸಲಾಗಿತು. ಎಕ್ಸ್ ರೇ ಪರೀಕ್ಷೆಯ ನಂತರ ಸಮಸ್ಯೆಯನ್ನು ಕಂಡುಹಿಡಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು. ಅಂತೆಯೇ 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, 10-12 ಶೇವಿಂಗ್ ಬ್ಲೇಡ್, 4 ದೊಡ್ಡ ಸೂಜಿಗಳು, ಒಂದು ಸರ, 263 ಕಾಯಿನ್ ಜೊತೆಗೆ ಒಂದಷ್ಟು ಗಾಜಿನ ಚೂರುಗಳು ಸೇರಿದಂತೆ 5 ಕೆಜಿ ವಸ್ತುಗಳನ್ನು ಹೊರತೆಗೆದಿದ್ದಾರೆ.

ರೋಗಿಯ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಈ ಹಿನ್ನೆಲೆಯಲ್ಲಿ ವ್ಯಕ್ತಿ ಇಂತಹ ವಸ್ತುಗಳನ್ನು ನುಂಗಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಚಿಕಿತ್ಸೆಗೆ ರೋಗಿ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.