ರಾಷ್ಟ್ರೀಯ

ಉಗ್ರ ಸಯೀದ್ ಹಫೀಸ್ ಬಿಡುಗಡೆಯೊಂದಿಗೆ ಪಾಕ್ ಮುಖವಾಡ ಬಯಲು: ಭಾರತ

Pinterest LinkedIn Tumblr


ನವದೆಹಲಿ: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮತ್ ಉದ್ ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಮುಖವಾಡ ಬಯಲಾಗಿದೆ ಎಂದು ಭಾರತ ಸರ್ಕಾರ ಆರೋಪಿಸಿದೆ.

ಸಾಕ್ಷ್ಯಾಧಾರ ಕೊರತೆ ನೀಡಿ ಪಾಕಿಸ್ತಾನ ನ್ಯಾಯಾಲಯವೊಂದು ಗೃಹ ಬಂಧನದಿಂದ ಮುಕ್ತಗೊಳಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಅವರು ಸಯೀದ್ ಬಿಡುಗಡೆ ಮತ್ತೊಮ್ಮೆ ಪಾಕಿಸ್ತಾನ ಸರ್ಕಾರದ ಭಾಗದಲ್ಲಿ ಗಂಭೀರತೆಯ ಕೊರತೆಯನ್ನು ದೃಢಪಡಿಸುತ್ತದೆ ಎಂದರು.

ಭಯೋತ್ಪಾದನೆಯನ್ನು ರಕ್ಷಿಸಲು ಮತ್ತು ಬೆಂಬಲಿಸುವ ತನ್ನ ಪಾಲಿಯನ್ನು ಪಾಕಿಸ್ತಾನ ಬದಲಿಸಿಲ್ಲ. ಇದೀಗ ಪಾಕಿಸ್ತಾನದ ನಿಜ ಮುಖ ಬಯಲಾಗಿದೆ. ಹಫೀಜ್ ಸಯೀದ್ ರಂತಹ ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಜವಾಬ್ದಾರಿಗಳನ್ನು ಪಾಕ್ ಪೂರೈಸುತ್ತದಾ ಎಂದು ರವೀಶ್ ಪ್ರಶ್ನಿಸಿದ್ದಾರೆ.

ಲಾಹೋರ್ ಹೈಕೋರ್ಟ್ ನಿನ್ನೆ 10 ತಿಂಗಳ ಗೃಹ ಬಂಧನದಿಂದ ಹಫೀಜ್ ಸಯೀದ್ ಮುಕ್ತಿಗೊಳಿಸಿದ ಬಳಿಕ ಭಾರತ ಸರ್ಕಾರದಿಂದ ಈ ಪ್ರತಿಕ್ರಿಯೆ ಬಂದಿದೆ.

ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಜನವರಿ 31 ರಿಂದ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಹಫೀಜ್ ಸಯೀದ್ ನೊಂದಿಗೆ ಆತನ ಸಹಚರರಾದ ಅಬ್ದುಲ್ ರೆಹಮಾನ್ ಅಬಿದ್ ಹಾಗೂ ಖಾಝಿ ಕಶಿಫ್ ಹುಸೇನ್ ನ್ನು ಪಂಜಾಬ್ ಸರ್ಕಾರ 1997 ರ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ 90 ದಿನಗಳು ಬಂಧಿಸಿಟ್ಟಿತ್ತು.

ಜೆಯುಡಿ ಉಗ್ರ ಸಂಘಟನೆ ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಾಗವಾಗಿದ್ದು, 2008ರ ಮುಂಬೈ ದಾಳಿಗೆ ಇದೇ ಉಗ್ರ ಸಂಘಟನೆ ಕಾರಣವಾಗಿದೆ.

Comments are closed.