ರಾಷ್ಟ್ರೀಯ

ಗುಜರಾತ್ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ: ಕಾಂಗ್ರೆಸ್- ಪಿಎಎಎಸ್‌ ಕಾರ್ಯಕರ್ತರ ನಡುವೆ ಜಟಾಪಟಿ

Pinterest LinkedIn Tumblr

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಗುಜರಾತಿನ ಕಾಂಗ್ರೆಸ್ ಮತ್ತು ಪಟೇಲ್‌ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಡುತ್ತಿರುವ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಿಎಎಎಸ್‌) ಕಾರ್ಯಕರ್ತರ ನಡುವೆ ಸೂರತ್‍ನಲ್ಲಿ ಜಟಾಪಟಿ ನಡೆದಿದೆ.

ಅಭ್ಯರ್ಥಿಗಳ ಪಟ್ಟಿಯಲ್ಲಿ ತಮಗೆ ಆದ್ಯತೆ ನೀಡಿಲ್ ಎಂದು ಪಿಎಎಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಮೊದಲ ಹಂತದ ಪಟ್ಟಿ ಬಿಡುಗಡೆಯಲ್ಲಿ ಪಿಎಎಎಸ್‌ಗೆ 5 ಸೀಟು ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಇದೀಗ ಎರಡೇ ಎರಡು ಸೀಟುಗಳಲ್ಲಿ ಪಿಎಎಎಸ್‍ಗೆ ನೀಡಲಾಗಿದೆ.

ಪಿಎಎಎಸ್ ಕೋರ್ ಕಮಿಟಿ ಜತೆ ಚರ್ಚೆ ನಡೆಸದೆಯೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಎಂದು ಪಿಎಎಎಸ್‌ನ ಸಂಚಾಲಕ ದಿನೇಶ್‌ ಭಂಭಾನಿಯಾ ಆರೋಪಿಸಿದ್ದಾರೆ.

ಪಿಎಎಎಸ್‍ನ ಲಲಿತ್ ಮಸೋಯ, ಅಮಿತ್ ತುಮ್ಮಾರ್ ಅವರಿಗೆ ಸೀಟು ಲಭಿಸಿದ್ದು, ಧರೋಜಿ, ಜುನಗಡ್ ವಿಧಾನಸಭಾ ಕ್ಷೇತ್ರದಲ್ಲಿ ಇವರು ಸ್ಪರ್ಧಿಸಲಿದ್ದಾರೆ.

ಎರಡು ಹಂತಗಳಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಡಿಸೆಂಬರ್ 8ರಂದು ನಡೆಯಲಿದೆ

Comments are closed.