ಚೆನ್ನೈ: ಚೆನ್ನೈ ಮೂಲದ ಅಕ್ಷಯ ಷಣ್ಮುಗಂ ಎಂಬ 29 ವರ್ಷದ ಯುವತಿ, ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಫೋರ್ಬ್ಸ್ ನಿಯತಕಾಲಿಕೆಯ ಸಾಧಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಲ್ಯುಮ್ ಇಂಕ್ ಎಂಬ ಕಂಪನಿಯ ಸಿಇಒ ಆಗಿರುವ ಅಕ್ಷಯ ಷಣ್ಮುಗಂ ಅವರು, ಹೊಸ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಇದು ಧೂಮಪಾನವನ್ನು ತ್ಯಜಿಸಲು ಬಯಸುವವರಿಗೆ ಸಹಕರಿಸುತ್ತದೆ.
ಸ್ಮಾರ್ಟ್ ವಾಚ್‌ನಂತಿರುವ ಈ ಸಾಧನವು ಧೂಮಪಾನಿಗಳ ಚಲನವಲನವನ್ನು ಗ್ರಹಿಸಿ ದಾಖಲಿಸಿಕೊಳ್ಳುತ್ತದೆ. ಹಾಗೂ ಧೂಮಪಾನ ಮಾಡದಂತೆ ಸೂಚನೆಗಳನ್ನು ನೀಡುತ್ತಿರುತ್ತದೆ.
”ನಮ್ಮ ಸಾಧನವು ವ್ಯಸನಿಗಳಿಗೆ ಸೂಕ್ತ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡುತ್ತದೆ. ಕಾರ್ಪೊರೇಟ್ ವಲಯದ ಕಂಪನಿಗಳಿಗೂ ಈ ಸಾಧನ ಸೂಕ್ತವಾಗಿದ್ದು, ಉದ್ಯೋಗಿಗಳನ್ನು ವ್ಯಸನ ಮುಕ್ತಗೊಳಿಸಲು ಸಹಕಾರಿ;; ಎನ್ನುತ್ತಾರೆ ಅಕ್ಷಯ. ಅವರು 2009ರಲ್ಲಿ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದರು.
ಫೋರ್ಬ್ಸ್ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.