ರಾಷ್ಟ್ರೀಯ

ಪಾಸ್‌ಪೋರ್ಟ್‌ ನೀಡಲು ಬಾಕ್ಸರ್‌ಗೆ ಸುಷ್ಮಾ ಇಟ್ಟ ಬೇಡಿಕೆ ಏನು?

Pinterest LinkedIn Tumblr


ಹೊಸದಿಲ್ಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನಿಯರ್ ಮಹಿಳಾ ಬಾಕ್ಸರ್‌ಗೆ ಪಾಸ್‌ಪೋರ್ಟ್ ವಿತರಿಸುವ ಕಾರ್ಯ ತ್ವರಿತಗೊಳಿಸಿದ್ದಾರೆ. ‘ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ದೇಶಕ್ಕೆ ಹೆಮ್ಮೆ ತನ್ನಿ’ ಎಂದು, ಬೇಡಿಕೆ ಇಟ್ಟಿದ್ದಾರೆ.

ಇತ್ತೀಚಿಗೆ ನಡೆದ ಜೂನಿಯರ್ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 54 ಕೆ.ಜಿ ತೂಕದ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಝಲಕ್ ತೋಮರ್ ಅವರು ಉಕ್ರೇನ್‌ನಲ್ಲಿ ನಡೆಯಲಿರುವ ‘ವಲೆರಿಯಾ ಡೆಮೈನೊವಾ ಮೆಮೊರಿಯಲ್’ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಯುವ ಕ್ರೀಡಾಪಟು, ಪದಕ ವಿಜೇತೆ ಝಲಕ್ ತೋಮರ್ ಅವರು ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದವರು. ಉಕ್ರೇನ್‌ನ ನದ್ವಿರ್ನಾ ನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದರೂ ಸಹ, ಪಾಸ್‌ಪೋರ್ಟ್ ದೊರೆಯುವುದು ವಿಳಂಬವಾಗಿದೆ.

ತೋಮರ್ ಅವರ ಪಾಸ್‌ಪೋರ್ಟ್ ಅರ್ಜಿಯ ಸ್ಕ್ರೀನ್‌ಶಾಟ್‌ನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಖಾತೆಗೆ ಲಗ್ಗತ್ತಿಸಲಾಗಿದ್ದು, ಇದಕ್ಕೆ ಸ್ವರಾಜ್ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಸಾಕಷ್ಟು ಜನರ ಮನಗೆದ್ದಿದ್ದು, ಅವರ ಹಾಸ್ಯಾಸ್ಪದ ಪ್ರತಿಕ್ರಿಯೆಗಳು ಸಹ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

Comments are closed.