ರಾಷ್ಟ್ರೀಯ

ಬಸ್‌ನಲ್ಲೇ ಹತ್ತನೇ ತರಗತಿ ವಿದ್ಯಾರ್ಥಿಯೊಂದಿಗೆ ರಾಹುಲ್‌ ಸೆಲ್ಫಿ

Pinterest LinkedIn Tumblr

ಅಹಮದಾಬಾದ್‌‌: ರಾಜಕೀಯ, ಸಿನಿಮಾ ಹಾಗೂ ಕ್ರಿಕೆಟ್‌‌ ಸ್ಟಾರ್ಸ್‌ ಸಿಕ್ಕಿದರೆ ಯುವ ಸಮೂಹ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಇದಕ್ಕೆ ಪೂರಕವೆಂಬಂತೆ ಹತ್ತನೇ ತರಗತಿ ವಿದ್ಯಾರ್ಥಿನಿ ಮಾಂತಾಶ ಎಂಬಾಕೆ ಕೂಡಾ ಕಾಂಗ್ರೆಸ್‌ ಯುವನಾಯಕ ರಾಹುಲ್‌ ಗಾಂಧಿಯೊಂದಿಗೆ ಸೆಲ್ಫಿ ತೆಗದು ಭಾರೀ ವೈರಲ್‌ ಆಗಿದ್ದಾರೆ.

ಗುಜರಾತ್‌‌ನ ಅಹಮದಾಬಾದ್‌‌ನಲ್ಲಿ ರೋಡ್‌‌ ಶೋನಲ್ಲಿ ಭಾಗಿಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌‌ ಗಾಂಧಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮಾಂತಾಶ ಚುನಾವಣಾ ಪ್ರಚಾರದ ವಾಹನವನ್ನೇ ಏರಿ ಹೋಗಿದ್ದು, ಇದರ ವೀಡಿಯೋ ಮತ್ತು ಅವರೊಂದಿಗೆ ತೆಗೆದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಭಾವಿ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ಯುವರಾಜನ ಹೆಗಲ ಮೇಲೆ ಕೈಹಾಕಿ ಸೆಲ್ಫಿ ತೆಗೆಸಿಕೊಂಡ ಮಾಂತಾಶ ರಾಹುಲ್ ಗಾಂಧಿಯ ಬಹುದೊಡ್ಡ ಅಭಿಮಾನಿಯಂತೆ. ‘ಭರೂಚ್‌ಗೆ ರಾಹುಲ್‌ ಬರುತ್ತಿರುವ ಸುದ್ದಿ ತಿಳಿದು ನನಗೆ ತುಂಬಾ ಖುಶಿಯಾಗಿತ್ತು. ರಾಹುಲ್‌ ಇದ್ದ ವಾಹನದೊಂದಿಗೆ ನಾನೂ ನಡೆದುಕೊಂಡು ಬರುತ್ತಿದ್ದ, ಮೊಹಮ್ಮದ್‌ಪುರದ ಬಳಿ ರಾಹುಲ್‌ ನನ್ನನ್ನು ನೋಡಿದ್ದರು, ಬಳಿಕ ಸ್ಟೇಷನ್‌ ರಸ್ತೆಯ ಬಳಿ ನನ್ನನ್ನು ಕಂಡು ಕೈಬೀಸಿದರು. ಇನ್ನೂ ಕೊಂಚ ದೂರ ಕಸಕ್‌ ಹತ್ತಿರ ನನನ್ನು ನೋಡಿದ ವೇಳೆ ಸೆಲ್ಫಿ ಬೇಕು ಎಂದು ಕೇಳಿಕೊಂಡೆ’ ಎಂದು ಮಾಂತಾಶ ಹೇಳಿದ್ದಾರೆ,

Comments are closed.