ರಾಷ್ಟ್ರೀಯ

37 ಸಾವಿರ ಬಾಕ್ಸ್‌ ನಕಲಿರೂಪ್‌ಮಂತ್ರ ಪತ್ತೆ

Pinterest LinkedIn Tumblr


ನವದೆಹಲಿ: ಇತ್ತೀಚೆಗೆ ದೆಹಲಿಯ ಕನಿಕ ಇಂಪಾಟ್ಸ್‌ ಕಚೇರಿ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಆಯುಕ್ತೆ ನಿಧಿ ಸಿದನ ಹಾಗೂ ನಯಮತ್‌ ಸಿಸ್ತನಿ ಅವರ ತಂಡ 37 ಸಾವಿರ “ರೂಪ್‌ ಅಲ್ಟ್ರಾ’ ಹೆಸರಿನ ನಕಲಿ ರೂಪ್‌ ಮಂತ್ರ ಉತ್ಪನ್ನಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ.

ಖ್ಯಾತ ಆಯುರ್ವೇದ ಉತ್ಪನ್ನಗಳ ತಯಾರಕ ಸಂಸ್ಥೆ ದಿವಿಸಾ ಹರ್ಬಲ್‌ರವರ ಚರ್ಮ ಆರೋಗ್ಯ ರಕ್ಷಿಸುವ ಪರಿಣಾಮಕಾರಿ ಉತ್ಪನ್ನ “ರೂಪ್‌ ಮಂತ್ರ’ ಕ್ರೀಮ್‌ನ ನಕಲಿ ಉತ್ಪನ್ನವನ್ನು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಕನಿಕ ಇಂಪಾಟ್ಸ್‌ ಉತ್ಪಾದಿಸುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಆಯುಕ್ತೆ ನಿಧಿ ಸಿದನ ಮತ್ತು ನಯಮತ್‌ ಸಿಸ್ತನಿ ತಂಡ ದಾಳಿ ನಡೆಸಿದೆ.

ಕನಿಕ ಇಂಪಾಟ್ಸ್‌ ಬೃಹತ್‌ ಪ್ರಮಾಣದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದ ಪಿಪ್ಪಾಲಿ ಲೇನ್‌, ಮೋತಿ ಖಾನ್‌ ಹಾಗೂ ಸದ್ದಾರ್‌ ಬಜಾರ್‌ ಗೋದಾಮಗಳಲ್ಲಿದ್ದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ ಎಂದು ಕಂಪೆನಿಯ ಡಾ. ವಿಜಯ್‌ ಕಿಮಟಾ ತಿಳಿಸಿದ್ದಾರೆ.

ಜನಪ್ರಿಯ ರೂಪ್‌ಮಂತ್ರ ಮಾರುಕಟ್ಟೆಯನ್ನು ಕಂಡು ಸಹಿಸಲಾರದ ನಕಲಿ ಕಂಪನಿಗಳು ಇಂತಹ ಹೀನ ಕೃತ್ಯ ಎಸಗಿದ್ದಾರೆ. ಸಾರ್ವಜನಿಕರಿಂದ ನಕಲಿ ರೂಪ್‌ಮಂತ್ರದ ದೂರುಗಳು ನಮಗೆ ಬರುತ್ತಿದ್ದವು. ಅವುಗಳ ಆಧಾರ ಮೇಲೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದೇವು.

ನ್ಯಾಯಾಲಯದ ಆದೇಶದಂತೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಂಪನಿಯು ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ನಮ್ಮ ಸಂಸ್ಥೆಯ ಉತ್ಪನ್ನಗಳ ಹಾಗೂ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ನಕಲಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

-ಉದಯವಾಣಿ

Comments are closed.