ರಾಷ್ಟ್ರೀಯ

ಗುಜರಾತ್ ಚುನಾವಣೆ: 50ಕ್ಕೂ ಹೆಚ್ಚು ರ‍್ಯಾಲಿಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ

Pinterest LinkedIn Tumblr


ಗಾಂಧಿನಗರ: ಗುಜರಾತ್‌ ಚುನಾವಣೆಯಲ್ಲಿ ಭಾರೀ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ಅವಲಂಬಿಸಿದೆ. ಡಿಸೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಮುನ್ನ ಕನಿಷ್ಠ 50 ರ‍್ಯಾಲಿಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂದು ಹಿರಿಯ ಬಿಜೆಪಿ ಮುಖಂಡರು ತಿಳಿಸಿದ್ದಾರೆ.

‘ದಕ್ಷಿಣ ಗುಜರಾತ್‌, ಸೌರಾಷ್ಟ್ರ, ಕಛ್‌ ಮತ್ತು ಮಧ್ಯ ಗುಜರಾತ್‌ಗಳಲ್ಲಿ 50 ರಿಂದ 70 ರ‍್ಯಾಲಿಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್‌ 10ರ ಬಳಿಕ ಪೂರ್ಣ ಪ್ರಮಾಣದ ಪ್ರಚಾರದಲ್ಲಿ ಪ್ರಧಾನಿ ತೊಡಗಿಕೊಳ್ಳಲಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ದಿನಕ್ಕೆ ಎರಡು-ಮೂರು ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಲಿದ್ದಾರೆ’ ಎಂದು ಮೂಲವೊಂದು ತಿಳಿಸಿದೆ.

ಪ್ರಧಾನಿ ಜನವರಿಯಿಂದೀಚೆಗೆ ಈಗಾಗಲೇ ಸುಮಾರು 10 ಬಾರಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಹೀಗಾಗಿ ಗುಜರಾತ್‌ ಚುನಾವಣೆ ಬಿಜೆಪಿ ಮತ್ತು ಪ್ರಧಾನಿ ಪಾಲಿಗೆ ಪ್ರತಿಷ್ಠೆಯ ವಿಷಯವೇ ಆಗಿದೆ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. 2014ರಲ್ಲಿ ಗುಜರಾತ್‌ ರಾಜಕೀಯದಿಂದ ಮೋದಿ ಅವರು ಹೊರ ನಡೆದ ಬಳಿಕ ಜನರನ್ನು ಸೆಳೆಯಬಲ್ಲ ವರ್ಚಸ್ವೀ ನಾಯಕರ ಕೊರತೆ ರಾಜ್ಯ ಬಿಜೆಪಿಗೆ ಎದುರಾಗಿದೆ.

ಈ ಮೊದಲು ಬಿಜೆಪಿ 15ರಿಂದ 18 ರ‍್ಯಾಲಿಗಳಿಗಷ್ಟೇ ಪ್ರಧಾನಿಯವರನ್ನು ಆಹ್ವಾನಿಸುವ ಬಗ್ಗೆ ಯೋಚಿಸಿತ್ತು. ಆದರೆ ಇದೀಗ 50ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು, ರೋಡ್‌ಶೋಗಳಲ್ಲಿ ಭಾಗವಹಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದೆ ಎಂದು ಬಿಜೆಪಿ ಮೂಲ ಹೇಳಿದೆ.

ಹೋಪ್ ಫಾರ್ ಬೆಸ್ಟ್. ಬ್ಜ್ಪ್ ವಿನ್ ಇನ್ ಗುಜ್ರತ್ ಈಸ್ ವೇರ್ಯ್ ಮಚ್ ರಿಕ್ವೈಯರ್ಡ್ ಫಾರ್ ದೆಮ್ ತೋ ವಿನ್ ಇನ್ ಅದರ್ ಸ್ಟೇಟ್ಸ್ ಫಾರ್ ಫ್ಯೂಚರ್ ಎಲೆಕ್ಶನ್ಸ್.

ಮುಂಬರುವ ಚುನಾವಣೆ ಪ್ರಚಾರದ ವೇಳೆ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲೇ ಸಭೆ ನಡೆಸುವ ಸಾಧ್ಯತೆಯೂ ಇದೆ. ಚುನಾವಣೆ ಪ್ರಚಾರಕ್ಕೆ ಡಿಜಿಟಲ್‌ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ರೂಪುರೇಷೆ ಸಿದ್ಧಪಡಿಸುತ್ತಿದೆ.

ತಾರಾ ಪ್ರಚಾರಕರ ಪಟ್ಟಿಯಲ್ಲಿ ಉ.ಪ್ರ. ಸಿಎಂ:
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೆಸರೂ ಬಿಜೆಪಿಯ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದೆ. ಯೋಗಿ ಅವರನ್ನೂ ಗರಿಷ್ಠ ಸಾರ್ವಜನಿಕ ಸಭೆಗಳಲ್ಲಿ ಬಳಸಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ.

Comments are closed.