ರಾಷ್ಟ್ರೀಯ

ತಾಜ್‌ನಲ್ಲಿ ನಮಾಜ್ ನಿಲ್ಲಿಸಿ, ಇಲ್ಲ ಶಿವ ಪ್ರಾರ್ಥನೆಗೆ ಅವಕಾಶ ಕೊಡಿ: ಆರ್‌ಎಸ್‌ಎಸ್ ಅಂಗಸಂಸ್ಥೆ

Pinterest LinkedIn Tumblr


ಆಗ್ರಾ: ವಿಶ್ವ ವಿಖ್ಯಾತ ತಾಜ್ ಮಹಲ್‌ನಲ್ಲಿ ಶುಕ್ರವಾರ ನಡೆಸುವ ನಮಾಜ್ ನಿಷೇಧಿಸಬೇಕು, ಇಲ್ಲವೇ ಶಿವನ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಅಂಗಸಂಸ್ಥೆಯಾದ ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಸಮಿತಿ ಒತ್ತಾಯಿಸಿದೆ.

‘ರಾಷ್ಟ್ರೀಯ ಪರಂಪರೆಯಾಗಿರುವ ತಾಜ್ ಮಹಲನ್ನು ಮುಸ್ಲಿಮರು ಧಾರ್ಮಿಕ ಸ್ಥಳವನ್ನಾಗಿ ಏಕೆ ಬಳಸಿಕೊಳ್ಳಬೇಕು,’ ಎಂದು ಪ್ರಶ್ನಿಸಿರುವ ಸಮಿತಿಯ ಕಾರ್ಯದರ್ಶಿ ಡಾ. ಬಾಲಮುಕುಂದ್ ಪಾಂಡೆ, ನಮಾಜ್ ಮಾಡುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದು, ಆ ಮೂಲಕ ತಾಜ್‌ಗೆ ಸಂಬಂಧಿಸಿದಂತೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾಜ್‌ ಮಹಲ್‌ಗೆ ಭೇಟಿ ನೀಡುವ ಮುನ್ನವೇ ಹತ್ತಾರು ಹಿಂದೂ ಯುವ ವಾಹಿನಿ ಕಾರ್ಯಕರ್ತರು ತಾಜ್ ಮಹಲ್ ಸ್ಮಾರಕದ ಮುಂದೆ ‘ಶಿವ ಚಾಲೀಸ್’ ಪಠಿಸಿದ್ದರು. ಪ್ರತಿ ಶುಕ್ರವಾರ ತಾಜ್ ಮಹಲಿನಲ್ಲಿ ನಮಾಜ್ ಮಾಡಲು ಅವಕಾಶ ಮಾಡಿ ಕೊಟ್ಟಂತೆಯೇ, ತಮಗೂ ಪ್ರಾರ್ಥಿಸಲು ಅನುಮತಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದರು.

Comments are closed.