ರಾಷ್ಟ್ರೀಯ

ಒಂದೆಡೆ ಹಸಿವಿನ ಹಾಹಾಕಾರ, ಮತ್ತೊಂದೆಡೆ ತ್ಯಾಜ್ಯಕ್ಕೆ ಸೇರುತ್ತಿವೆ ಭಾರತದ ಅರ್ಧದಷ್ಟು ತರಕಾರಿ, ಹಣ್ಣುಗಳು!

Pinterest LinkedIn Tumblr


ನವದೆಹಲಿ: ಹಸಿವಿನ ಹಾಹಾಕಾರ ಎಲ್ಲಿಲ್ಲ? ಭಾರತವೂ ಸೇರಿದಂತೆ ಈ ಸಮಸ್ಯೆ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಕಂಡುಬರುವಂಥಹದ್ದೇ. ಭಾರತದಲ್ಲೇ ಒಂದೆಡೆ ಹಸಿವಿನ ಹಾಹಾಕಾರವಾದರೆ ಮತ್ತೊಂದೆಡೆ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಅರ್ಧದಷ್ಟು ಹಾಲು, ಹಣ್ಣು, ತರಕಾರಿಗಳು ತ್ಯಾಜ್ಯಕ್ಕೆ ಸೇರುತ್ತಿವೆ.

ಭಾರತ ಹಾಲು, ಹಣ್ಣು, ತರಕಾರಿಗಳನ್ನು ಅತಿ ಹೆಚ್ಚು ಉತ್ಪಾದಿಸುವ ರಾಷ್ಟ್ರವಾಗಿದ್ದು, ಶೇ.40-50 ರಷ್ಟು ಉತ್ಪಾದಿತ ಹಣ್ಣು, ತರಕಾರಿ, ಹಾಲು ತ್ಯಾಜ್ಯಕ್ಕೆ ಸೇರುತ್ತಿದ್ದು, 440 ಬಿಲಿಯನ್ ನಷ್ಟು ಮೌಲ್ಯದ ಆಹಾರ ಉತ್ಪನ್ನಗಳು ವ್ಯರ್ಥವಾಗುತ್ತಿದೆ ಎಂದು ಅಸೋಚಾ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.

ಭಾರತದಲ್ಲಿ ಸುಮಾರು 6,300 ಕೋಲ್ಡ್ ಸ್ಟೋರೇಜ್ ಗಳ ವ್ಯವಸ್ಥೆ ಇದ್ದು, 30.11 ಮಿಲಿಯನ್ ಟನ್ ನಷ್ಟು ಉತ್ಪನ್ನಗಳನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಹಾಳಾಗುತ್ತಿರುವ ಉತ್ಪನ್ನಗಳ ಪೈಕಿ ಶೇ.11 ರಷ್ಟನ್ನು ಮಾತ್ರ ಸಂರಕ್ಷಿಸಬಹುದಾಗಿದೆ ಎಂದು ಅಸೋಚಾಮ್ ನ ಪ್ರಧಾನ ಕಾರ್ಯದರ್ಶಿ ಡಿಎಸ್ ರಾವತ್ ತಿಳಿಸಿದ್ದಾರೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಪಂಜಾಬ್ ನಲ್ಲಿ ಶೇ.60 ರಷ್ಟು ವ್ಯರ್ಥವಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಕೋಲ್ಡ್ ಸ್ಟೋರೇಜ್ ಗಳ ಲಭ್ಯತೆಯೇ ಇಲ್ಲದೇ ಸಮಸ್ಯೆ ಎದುರಾಗುತ್ತಿದೆ. ಅಷ್ಟೇ ಅಲ್ಲದೇ ಹವಾಮಾನ ಸಹ ಆಹಾರ ಸಂರಕ್ಷಣೆಗೆ ಪೂರಕವಾಗಿಲ್ಲ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.

Comments are closed.